ಡಿವಿಜಿ ಸುದ್ದಿ, ದಾವಣಗೆರೆ: ಲಾಕ್ ಡೌನ್ ನಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿದ್ದು, ಮೇ1 ರಿಂದ ಪ್ರತಿ ಒಬ್ಬರಿಗೆ 10 ಕೆಜಿ ಅಕ್ಕಿ, 1 ಕೆಜಿ ಬೇಳೆ ಪಡಿತರ ವಿತರಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ತಿಳಿಸಿದರು.
ಜಿಎಂಐಟಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ, 2 ಕೆಜಿ ಬೇಳೆ ವಿತರಿಸುವಂತೆ ಸೂಚಿಸಲಾಗಿತ್ತು. ಆದರೆ, ಬೇಳೆ ಕೊರತೆ ಹಿನ್ನೆಲೆ 1 ಕೆಜಿ ಬೇಳೆ, 10 ಕೆ.ಜಿ ಅಕ್ಕಿ ವಿತರಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.ಜಿಲ್ಲೆಯಲ್ಲಿ 6.27 ಲಕ್ಷ ಜನಧನ್ ಖಾತೆಗಳಿದ್ದು, ಎಲ್ಲರ ಖಾತೆಗೆ 500 ರೂಪಾಯಿಯಂತೆ ಒಟ್ಟು 15.65 ಕೋಟಿ ಜಮೆ ಮಾಡಲಾಗಿದೆ.ಇನ್ನು ಪ್ರಧಾನಿ ಮಂತ್ರಿ ಉಜ್ವಾಲ ಯೋಜನೆ ಅಡಿಯಲ್ಲಿ 1.21 ಲಕ್ಷ ಫಲಾನುಭವಿಗಳಿದ್ದು, ಉಚಿತವಾಗಿ ಗ್ಯಾಸ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ, ಇನ್ನು ಕೂಡ 49 ಸಾವಿರ ಜನ ಗ್ಯಾಸ್ ತುಂಬಿಸಿಕೊಂಡಿಲ್ಲ . ಕೂಡಲೇ ಸಾರ್ವಜನಿಕು ಗ್ಯಾಸ್ ಸಿಲಿಂಡ್ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಿಸಾನ್ ಸಮ್ಮಾನ್ ಅಡಿಯಲ್ಲಿ 1.93 ಲಕ್ಷ ಖಾತೆದಾರರು ಹೊಂದಿದ್ದು, ಪ್ರತಿಯೊಬ್ಬರಿಗೆ 2 ಸಾವಿರದಂತೆ 1.65 ಲಕ್ಷ ಖಾತೆಗಳಿ ತುಂಬಲಾಗಿದ.ಇನ್ನುಳಿದವರು ಮೂಲ ದಾಖಲಾತಿ ನೀಡಿ ಹಣ ಜಮೆ ಮಾಡಿಸಿಕೊಳ್ಳಬಹುದು.
ಜಿಲ್ಲೆಯಲ್ಲಿ 83 ಸಾವಿರ ಕಾರ್ಮಿಕರಿಉ ನೋಂದಣಿ ಮಾಡಿಸಿಕೊಂಡಿದ್ದು, ಅವರಲ್ಲಿ 71 ಸಾವಿರ ಜನರಿಗೆ 2 ಸಾವಿರ ರೂಪಾಯಿ ಜಮೆ ಮಾಡಲಾಗಿದೆ. ಇನ್ನುಳಿದವರು ದಾಖಲಾತಿ ನೀಡಿ ಹಣ ಜಮೆ ಮಾಡಿಸಿಕೊಳ್ಳಬಹುದು.



