ಡಿವಿಜಿ ಸುದ್ದಿ, ದಾವಣಗೆರೆ: ಕಾಂಗ್ರೆಸ್ ಹಿರಿಯ ಮುಖಂಡ, ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮಹಾನಗರ ಪಾಲಿಕೆಯ 11 ನೇ ವಾರ್ಡಿನ ಕಾರ್ಪೊರೇಟರ್ ಸೈಯದ್ ಚಾರ್ಲಿ ಅವರ 1,100 ಆಹಾರ ಕಿಟ್ ಗಳನ್ನು ಬಡ ಕುಟುಂಬಗಳಿಗೆ ವಿತರಿಸಿದರು.
ಆಹಾರ ಕಿಟ್ ವಿತರಣೆ ನಂತರ ಮಾತನಾಡಿದ ಅವರು, ಪಾಲಿಕೆ ಸದಸ್ಯರ ಈ ಮಾನವೀಯ ಕಾರ್ಯವನ್ನು ಶ್ಲಾಘನೀಯ. ಎಲ್ಲಾ ಸದಸ್ಯರು ಇದೇ ತರ ಮುಂದೆ ಬಂದು ಸಂಕಷ್ಟದ ಸಂದರ್ಭದಲ್ಲಿ ಸಹಾಯ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬರ್, ಕಾಂಗ್ರೆಸ್ ಮುಖಂಡ ಸೈಯದ್ ಸೈಫುಲ್ಲಾ, ಡಿ. ಬಸವರಾಜ್, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ತಂಜಿಮ್ ಅಧ್ಯಕ್ಷ ಸಾಧಿಕ್ ಪೈಲ್ವಾನ್ , ವಕ್ಫ್ ಅಧ್ಯಕ್ಷರ ಸಿರಾಜ್ ಅಹಮದ್, ದಾದು ಸೆಟ್, ಪಾಲಿಕೆ ಸದಸ್ಯ ಎ.ಬಿ ರಹೀಮ್ ಸಾಬ್, ಸ್ಥಳೀಯ ಮುಖಂಡ ಗಂಗರಾಜ್, ಪರಮೇಶ್ವರಪ್ಪ , ರುದ್ರಮ್ಮ, ಸದ್ದಾಮ್, ಕುಮಾರ್ , ಘಾಜಿ ಖಾನ್, ಆರಿಫ್ ಪೈಲ್ವಾನ್, ವಾಸಿಂ,ಭಾಷಾ ಉಪಸ್ಥಿತರಿದ್ದರು.