ಡಿವಿಜಿ ಸುದ್ದಿ, ದಾವಣಗೆರೆ: ನಗರದ ಬಡಕುಟುಂಬಗಳಿಗೆ ವೈಯಕ್ತಿಕವಾಗಿ ಆಹಾರ ಕಿಟ್ ಗಳನ್ನು ಪಾಲಿಕೆ ಸದಸ್ಯ ಗಡಿ ಗುಡಾಳ್ ಮಂಜುನಾಥ್ ಹಂಚಿದರು.
ಮಹಾನಗರಪಾಲಿಕೆಯ 38 ನೇ ವಾರ್ಡ್ ಸದಸ್ಯರಾದ ಗಡಿ ಗುಡಾಳ್ ಮಂಜುನಾಥ್ ಇಂದು ಮೂರನೇ ಬಾರಿಗೆ ತಮ್ಮ ವಾರ್ಡ್ ನಲ್ಲಿ ಇರುವ ಬಡಕುಟುಂಬಗಳಿಗೆ ಧವಸಧಾನ್ಯದ ಕಿಟ್ ವಿತರಣೆ ಮಾಡಿದರು.
ಪಾಲಿಕೆಯಿಂದ ಬಂದ ಕಿಟ್ ಗಳನ್ನು ಅಗತ್ಯವಿರುವ ಬೇರೆ ವಾರ್ಡ್ ಗಳಿಗೆ ನೀಡಿ, ತಮ್ಮ ವಾರ್ಡ್ ನಲ್ಲಿ ಕಿಟ್ ಅವಶ್ಯಕತೆಯಿರುವ ಬಡಕುಟುಂಬಗಳಿಗೆ ವೈಯಕ್ತಿಕವಾಗಿ ಕಿಟ್ ಮಾಡಿಸಿ ಹಂಚಿದ್ದು ವಿಶೇಷವಾಗಿತ್ತು.

ಅಕ್ಕಿ, ಸಕ್ಕರೆ, ಬೇಳೆ, ಗೋಧಿಹಿಟ್ಟು, ರಾಗಿಹಿಟ್ಟು , ಅಡುಗೆ ಎಣ್ಣೆ, ಸಾಂಬಾರ್ ಪುಡಿ, ಖಾರದಪುಡಿ, ಪುಳಿಯೋಗರೆ, ಮತ್ತೆ ರವೆ ಒಳಗೊಂಡ ಕಿಟ್ ವಿತರಿಸುವ ಸಂದರ್ಭದಲ್ಲಿ ಮುಖಂಡರಾದ ಆಲೂರು ಜ್ಯೋತಿರ್ಲಿಂಗ, ಕಾಂಗ್ರೆಸ್ ಮುಖಂಡ ಪ್ರಮೋದ್ ಕೆ.ವಿ, ಎಪಿಎಂಸಿ ಮಾಜಿ ಅಧ್ಯಕ್ಷ ಎಲ್. ಬಿ. ಬೈರೇಶ, ಪ್ರಜ್ವಲ್, ನಿಖಿಲ್, ಮನು, ನೀಲಕಂಠಪ್ಪ, ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ. ಎಲ್.ಹರೀಶ್ ಬಸಾಪುರ ಉಪಸ್ಥಿತರಿದ್ದರು.



