ಡಿವಿಜಿ ಸುದ್ದಿ, ದಾವಣಗೆರೆ: ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ದಾವಣಗೆರೆ ನಗರದ 35 ನೇ ವಾರ್ಡ್ ನ ನಿಟುವಳ್ಳಿ ಹೊಸ ಬಡಾವಣೆ, ದುಗ್ಗಮ್ಮನ ದೇವಸ್ಥಾನದ ಹಿಂಭಾಗ, ಕುಂಬಾರ್ ಓಣಿ, ಬಳೆಗಾರ ಓಣಿ, ತಳವಾರ್ ಓಣಿ, ಉಪ್ಪಾರ ಓಣಿಯ 1, 200 ಬಡಕುಟುಂಬಗಳಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡ ಹುಲ್ಮನಿ ಗಣೇಶ್ ತರಕಾರಿ, ಮಾಸ್ಕ್ ವಿತರಿಸಿದರು.

ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಅವರು ತರಕಾರಿ ಕಿಟ್ ಮತ್ತು ಮಾಸ್ಕ್ ವಿತರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಎನ್. ಚಂದ್ರು, ವಿಜಯ್ ಕುಮಾರ್, ಹುಲ್ಮನಿ ಹನುಮಂತಪ್ಪ, ಬೇಕರಿ ಗಿರೀಶ್, ಮೊಬೈಲ್ ಕಾಂತ, ಕಣಿವೆಪ್ಪರ್ ಮಂಜುನಾಥ್ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ. ಎಲ್. ಹರೀಶ್ ಬಸಾಪುರ ತಿಳಿಸಿದ್ದಾರೆ.



