ಡಿವಿಜಿ ಸುದ್ದಿ, ದಾವಣಗೆರೆ : ಮೀನುಗಾರಿಕೆ ಇಲಾಖೆಯಿಂದ ಜಿಲ್ಲೆಯ ಎಲ್ಲಾ ವೃತ್ತಿಪರ ಮೀನುಗಾರರಿಗೆ ಜಿ.ಪಂ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ಜಮೀನಿನಲ್ಲಿ ಕನಿಷ್ಠ 2000 ಚ.ಮೀ ಮೀನು ಕೃಷಿ ಕೈಗೊಳ್ಳಲು ಕೊಳ ನಿರ್ಮಾಣಕ್ಕೆ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಮೀನು ಮಾರಾಟ ಮತ್ತು ಮತ್ಸ್ಯವಾಹಿನಿಗೆ ಸಹಾಯ ಮತ್ತು ರಾಜ್ಯವಲಯ ಯೋಜನೆಗಳಾದ ಮೀನುಗಾರಿಕೆ ಸಲಕರಣೆ ಕಿಟ್ ಗೆ ಸಹಾಯ, ಫೈಬರ್ ಗ್ಲಾಸ್ ಹರಿಗೋಲು ವಿತರಣೆ, ಮೀನು ಉತ್ಪಾದನೆ ಹೆಚ್ಚಿಸಲು ಮತ್ಸ್ಯಕೃಷಿ ಆಶಾಕಿರಣ ಯೋಜನೆ ಮತ್ತು ಸೀಗಡಿ ಮತ್ತು ಹಿನ್ನೀರು ಮೀನುಕೃಷಿ ಪ್ರೋತ್ಸಾಹಿಸಲು ಅರ್ಜಿ ಆಹ್ವಾನಿಸಲಾಗಿದೆ.
ಮೀನುಗಾರರ ಸಹಕಾರ ಸಂಘ ಹಾಗೂ ವೈಯಕ್ತಿಕ ಮೀನು ಕೃಷಿಕರಿಗೆ ಮೀನುಮರಿ ಖರೀದಿಗೆ ಸಹಾಯ ಯೋಜನೆಯಡಿ ಸಹಾಯ ನೀಡಲಾಗುವುದು. ಈ ಕುರಿತಾದ ಮಾಹಿತಿಯನ್ನು ಕಚೇರಿ ವೇಳೆಯಲ್ಲಿ ಆಯಾ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಸಂಪರ್ಕಿಸಿ ಪಡೆಯಬಹುದೆಂದು ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಗಣೇಶ್.ಆರ್ ತಿಳಿಸಿದ್ದಾರೆ.



