ಡಿವಿಜಿ ಸುದ್ದಿ, ಹೊನ್ನಾಳಿ: ಡ್ರಗ್ಸ್ ಮಾಫಿಯಾದಲ್ಲಿ ಹೆಸರು ಕೇಳಿಬರುತ್ತಿರುವ ಜಮೀರ್ ಅಹ್ಮದ್ ಒಬ್ಬ ಚಿಲ್ಲರೆ, ಗುಜರಿ ಗಿರಾಕಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಜಮೀರ್ ಅಹ್ಮದ್ ಏನು ಗಳಿಸಿದರೂ, ಅದು ಅನೈತಿಕ ಚಟುವಟಿಕೆ ಗಳಿಸಿದ್ದಾಗಿದೆ. ಜಮೀರ್ ಅಹ್ಮದ್ ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾದರೆ, ಅವರ ಮನೆ ವಾಚ್ ಮನ್ ಆಗುವುದಾಗಿ ಹೇಳಿದ್ದರು. ಆದರೆ, ಯಡಿಯೂರಪ್ಪ ಸಿಎಂ ಅಗದ್ದಾರೆ. ಇನ್ನು ಕೂಡ ಜಮೀರ್ ಅವರು ವಾಚ್ ಮನ್ ಆಗಲಿಲ್ಲ.
ಆತ ಒಂದು ರೀತಿ ಎರಡು ನಾಲಿಗೆ ವ್ಯಕ್ತಿ. ಅನೈತಿಕ ಚಟುವಟಿಕೆ ಯಿಂದಲೇ ಉನ್ನತ ಸ್ಥಾನಕ್ಕೆ ಬಂದಿದ್ದಾನೆ. ಉಪ್ಪು ತಿಂದವರು ನೀರುಕುಡಿಯಲೇ ಬೇಕು. ನಮ್ಮ ಸರ್ಕಾರ ತನಿಖೆಗೆ ಪೊಲೀಸರಿಗೆ ಮುಕ್ತ ಅವಕಾಶ ನೀಡಿದೆ. ಡ್ರಗ್ಸ್ ವಿಚಾರದಲ್ಲಿ ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು.



