ಡಿವಿಜಿ ಸುದ್ದಿ, ದಾವಣಗೆರೆ: ಕಳೆದ 16 ತಿಂಗಳಿಂದ ಶಿಷ್ಯ ವೇತನಕ್ಕೆ ಆಗ್ರಹಿಸಿ 17 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಗೆ ಮಣಿದಿರುವ ಸರ್ಕಾರ 2020ರ ಜೂನ್ ವರೆಗೆ ಶಿಷ್ಯ ವೇತನ ನೀಡುವ ಮೌಖಿಕ ಭರವಸೆ ನೀಡಿದೆ. ಆದರೆ, ಮೌಖಿಕ ಆದೇಶಕ್ಕಿಂತ ಲಿಖಿತಾ ಆದೇಶ ನೀಡಬೇಕು ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ನಾತಕೋತ್ತರ ವಿದ್ಯಾರ್ಥಿ ಡಾ. ಹರೀಶ್, ನಾವು ಸರ್ಕಾರಿ ಕೋಟಾದಡಿ ಶಿಷ್ಯವೇತನ ಪಡೆದುಕೊಳ್ಳುತ್ತಿದ್ದೇವೆ. ಆದರೆ, ಕಳೆದ 16 ತಿಂಗಳಿಂದ ಶಿಷ್ಯವೇತನ ಸ್ಥಗಿತಗೊಳಿದಸಲಾಗಿತ್ತು. ಇದಕ್ಕಾಗಿ ಅನೇಕ ಸಲ ಮುಖ್ಯಮಂತ್ರಿಗಳು, ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ. ನಮ್ಮ ಮನವಿಗೆ ಸರ್ಕಾರ ಪುರಸ್ಕಾರ ನೀಡದಿದ್ದಾಗ ಕಳೆದ 17 ದಿನದಿಂದ ಪ್ರತಿಭಟನೆ ನಡೆಸಿದ್ದೇವೆ. ಈಗ ಪ್ರತಿಭಟನೆಯ ಫಲವಾಗಿ 2020 ಜೂನ್ ವರೆಗೆ ಸರ್ಕಾರ ಶಿಷ್ಯ ವೇತನ ನೀಡುವ ಭರವಸೆ ನೀಡಿರುವುದು ಸ್ವಾಗತರ್ಹ.
ಇದು ಕೇವಲ ಭರವಸೆ ಆಗಿರದೆ, ಲಿಖಿತ ರೂಪದಲ್ಲಿ ಆದೇಶ ನೀಡಬೇಕು. ಇನ್ನು 2020 ರಿಂದ ಆಡಳಿತ ಮಂಡಳಿಯೇ ನೀಡುತ್ತೆ ಎಂದು ಹೇಳಲಾಗುತ್ತಿದೆ, ಈ ಬಗ್ಗೆ ಆಡಳಿತ ಮಂಡಳಿಯೂ ಲಿಖಿತ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಮೂರು ದಿನದಲ್ಲಿ ನಮ್ಮ ಲಿಖಿತ ಆದೇಶ ನೀಡದಿದ್ದರೆ, ಮತ್ತೆ ಪ್ರತಿಭಟನೆ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಡಾ. ಹಿತಾ, ಡಾ.ಸುಧಾಕರ್, ಡಾ. ನಿಧಿ ಉಪಸ್ಥಿತರಿದ್ದರು.