ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಆ.09ರಂದು 12.6 ಮಿ.ಮೀ ಸರಾಸರಿ ಮಳೆಯಾಗಿದ್ದು, ಒಟ್ಟಾರೆ 5.05 ಲಕ್ಷ ರೂಪಾಯಿ ಅಂದಾಜು ನಷ್ಟ ಸಂಭವಿಸಿದೆ.
ಯಾವ ತಾಲ್ಲೂಕಿನಲ್ಲಿ ಎಷ್ಟು ಮಳೆ..?
- ಚನ್ನಗಿರಿ -12.0 ಮಿ.ಮೀ
- ದಾವಣಗೆರೆ -4.0 ಮಿ.ಮೀ
- ಹರಿಹರ – 6.0 ಮಿ.ಮೀ
- ಹೊನ್ನಾಳಿ -10.0 ಮಿ.ಮೀ
- ಜಗಳೂರು – 2.0 ಮಿ.ಮೀ
ದಾವಣಗೆರೆ ತಾಲ್ಲೂಕಿನಲ್ಲಿ 8 ಮನೆ ಭಾಗಶಃ ಹಾನಿಯಾಗಿದ್ದು ರೂ.1 ಲಕ್ಷ ನಷ್ಟ ಸಂಭವಿಸಿರುತ್ತದೆ. ಹೊನ್ನಾಳಿ ತಾಲ್ಲೂಕಿನಲ್ಲಿ 3 ಮನೆ ಹಾಗೂ 3 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು ರೂ. 1.40000 ಸಾವಿರ ನಷ್ಟ ಸಂಭವಿಸಿರುತ್ತದೆ. ನ್ಯಾಮತಿ ತಾಲ್ಲೂಕಿನಲ್ಲಿ 1 ಮನೆ ಭಾಗಶಃ ಹಾನಿಯಾಗಿದ್ದು ರೂ.25 ಸಾವಿರ ನಷ್ಟ ಸಂಭವಿಸಿರುತ್ತದೆ.
ಚನ್ನಗಿರಿ ತಾಲ್ಲೂಕಿನಲ್ಲಿ 6 ಮನೆ ಭಾಗಶಃ ಹಾನಿಯಾಗಿದ್ದು ರೂ.2.10 ಲಕ್ಷ ನಷ್ಟ ಹಾಗೂ 3 ಎಕರೆ ಮೆಕ್ಕೆಜೋಳ ಹಾನಿಯಾಗಿದ್ದು ರೂ. 30 ಸಾವಿರ ನಷ್ಟ ಸಂಭವಿಸಿರುತ್ತದೆ. ಜಿಲ್ಲೆಯಲ್ಲಿ ಒಟ್ಟಾರೆ ರೂ.5.05 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.



