ಡಿವಿಜಿ ಸುದ್ದಿ, ಹರಿಹರ : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಹರಿಹರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಜುಲೈ 27 ರಿಂದ ಅರ್ಜಿಯನ್ನು http://davanagere.nic.in ಮುಖಾಂತರ ಸಲ್ಲಿಸಬಹುದಾಗಿದ್ದು , ಅರ್ಜಿ ಸಲ್ಲಿಸಲು ಆಗಸ್ಟ್ 27 ಕೊನೆಯ ದಿನವಾಗಿರುತ್ತದೆ.
ಮೀಸಲಾತಿ ಇತರೆ ಹೊಂದಿರುವ ಮಲೆಬೆನ್ನೂರು ಪುರಸಭೆ ವಾರ್ಡ್ ಸಂಖ್ಯೆ 19 ರ ವ್ಯಾಪ್ತಿಯ ಮಲೆಬೆನ್ನೂರು-ಇ ಅಂಗನವಾಡಿ ಕೇಂದ್ರ, ಕುಣಿಬೆಳಕೆರೆ ವ್ಯಾಪ್ತಿಯ ನಂದಿತಾವರೆ-ಎ ಹಾಗೂ ನಂದಿತಾವರೆ-ಸಿ, ಹರಳಹಳ್ಳಿ ವ್ಯಾಪ್ತಿಯ ಗುಳೇದಹಳ್ಳಿ, ಕುಂಬಳೂರು ವ್ಯಾಪ್ತಿಯ ಕುಂಬಳೂರು-ಸಿ, ಕೆ.ಬೇವಿನಹಳ್ಳಿ ವ್ಯಾಪ್ತಿಯ ಕೆ.ಬೇವಿನಹಳ್ಳಿ-ಎ, ಹನಗವಾಡಿ ವ್ಯಾಪ್ತಿಯ ದೊಗ್ಗಳ್ಳಿ-ಎ, ವಾಸನ ವ್ಯಾಪ್ತಿಯ ವಾಸನ-ಸಿ, ಕುಣಿಬೆಳಕೆರೆ ವ್ಯಾಪ್ತಿಯ ಕುಣಿಬೆಳಕೆರೆ ಅಂಗನವಾಡಿ ಕೇಂದ್ರಗಳಲ್ಲಿ ಹುದ್ದೆ ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.



