ಡಿವಿಜಿ ಸುದ್ದಿ, ದಾವಣಗೆರೆ: ಮೇ 31 ವರೆಗೆ ದೇಶದಲ್ಲಿ ಲಾಕ್‍ಡೌನ್ ಹಿನ್ನೆಲೆ ಕೇಂದ್ರ ಗೃಹ ಇಲಾಖೆಯು ಹೊರಡಿಸಿರುವ ಆದೇಶದನ್ವಯ ಕರ್ನಾಟಕ ರಾಜ್ಯ ಔಖಾಫ್ ಮಂಡಳಿ, ಬೆಂಗಳೂರು ಇವರು ರಾಜ್ಯದ ಎಲ್ಲಾ ಮಸೀದಿ/ದರ್ಗಾ/ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ (ನಮಾಜ್) ನಿರ್ಬಂಧಿಸಿದೆ.
ಮಾರ್ಗಸೂಚಿಗಳು: ಕೋವಿಡ್-19 ವೈರಸ್ ಹರಡುವ ಸಾಧ್ಯತೆ ಇರುವುದರಿಂದ ರಂಜಾನ್ ದಿನಗಳಂದು ಸಹ ಸಾಮೂಹಿಕ ಪ್ರಾರ್ಥನೆಗೆ ಮಸೀದಿ/ದರ್ಗಾ/ಈದ್ಗಾಗಳಲ್ಲಿ ನಿರ್ಬಂಧಿಸಲಾಗಿರುತ್ತದೆ.
• ಈದ್-ಉಲ್-ಫಿತ್ರ್ ಹಬ್ಬದ ದಿನದಂದು ಯಾರೂ ಸಹ ಮನೆಗಳಿಂದ ಹೊರಬಾರದೇ ಸಾಮಾಜಿಕ ಅಂತರ ಕಾಯ್ದುಕೊಳ್ಳತಕ್ಕದ್ದು ಹಾಗೂ ಯಾವುದೇ ಈದ್ ಮಿಲಾನ್ ಸಮಾರಂಭಗಳು ಏರ್ಪಡಿಸತಕ್ಕದಲ್ಲ.
• ಈದ್-ಉಲ್-ಫಿತ್ರ್ ಹಬ್ಬದಂದು ಕಂಟೇನ್‍ಮೆಂಟ್ ಏರಿಯಾ/ಹೈರಿಸ್ಕ್ ಏರಿಯಾ/ವಿದೇಶದ ಪ್ರವಾಸ ಹೊಂದಿರುವವರ ಸ್ನೇಹಿತರು ಹಾಗೂ ಬಂಧುಗಳೊಂದಿಗೆ ಹಸ್ತಲಾಘವ ಹಾಗೂ ಭೇಟಿಯಾಗುವುದನ್ನು ಸಂಪೂರ್ಣ ನಿರ್ಬಂಧಿಸಲಾಗಿರುತ್ತದೆ.
ಈ ಹಿಂದೆಯೂ ಜಾರಿಯಾದಂತಹ ಮಂಡಳಿಯ ಹಾಗೂ ಜಿಲ್ಲಾಡಳಿತದ ಸೂಚನೆ ಹಾಗೂ ನಿರ್ದೇಶನಗಳನ್ನು ದಾವಣಗೆರೆ ಜಿಲ್ಲೆಯ ಮುಸ್ಲಿಂ ಬಾಂಧವರು ಹಾಗೂ ಎಲ್ಲಾ ವಕ್ಫ್ ಸಂಸ್ಥೆಗಳ ಅಧ್ಯಕ್ಷರು/ಆಡಳಿತಾಧಿಕಾರಿಗಳು ತಪ್ಪದೇ ಪಾಲಿಸಬೇಕೆಂದು ಆದೇಶಿಸಲಾಗಿದೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಮೊಹಮ್ಮದ್ ಸಿರಾಜ್ ತಿಳಿಸಿದ್ದಾರೆ.



