ಡಿವಿಜಿ ಸುದ್ದಿ, ದಾವಣಗೆರೆ: ಅಂಬ್ಯುಲೆನ್ಸ್ ಚಾಲಕ ಕೆಲಸದಿಂದ ತಗೆದಿದ್ದರೆಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತರಾಟೆ ತಗೆದುಕೊಂಡ್ರು.
ಏನು ಸಾಧನೆ ಮಾಡಬೇಕೆಂದು ಆತ್ಮಹತ್ಯೆ ಮಾಡಿಕೊಳ್ಳುತ್ತೀಯಾ. ನಿನ್ನಿಗಾದ್ರೂ ಗೊತ್ತಾಗೋದಿಲ್ಲೇಮ್ಮ. ಮಗನ ವಿಷಯ ಕೊಡಿಯೋಕೆ ಕರೆದುಕೊಂಡು ಬಂದಿಯಲ್ಲ. ನಾನು 5 ವರ್ಷ ಮಗುವಾಗಿದ್ದಾಗ ತಂದೆಯನ್ನು ಕಳೆದುಕೊಂಡಿದ್ದೆ. ನನ್ನ ತಾಯಿ ಖಾನಾವಳಿಗೆ ರೊಟ್ಟಿ ಮಾರಿ ಜೀವನ ನಡೆಸುತ್ತಾ ನನ್ನನ್ನು ಸಾಕಿದ್ರು. ನಾನು ಕಷ್ಟದಿಂದ ಓದಿ ಜಿಲ್ಲಾಧಿಕಾರಿಯಾಗಿದ್ದೇನೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ಗ್ರಾಮದಲ್ಲಿ ಹೋಗಿ ಅಲ್ಲಿನ ಜನರನ್ನು ಕೇಳಿ ನಮ್ಮ ಕಷ್ಟ ಏನು ಎಂದು ಗೊತ್ತಾಗುತ್ತೆ. ದುಡಿದು ತಿನ್ನುವ ಬದಲು ಆತ್ಮಹತ್ಯೆ ಮಾಡಿಕೊಳ್ಳಲು ಬಂದಿಯಲ್ಲ. ನೀನೆಂತ ಗಂಡಸು ಎಂದು ಖಡಕ್ ಆಗಿ ಬುದ್ಧಿವಾದ ಹೇಳಿದ್ರು. ಜಿಲ್ಲಾಧಿಕಾರಿಗಳು ತನ್ನ ಕಷ್ಟದ ಜೀವನ ನೆನಪಿಸಿಕೊಂಡು ಕಣ್ಣಲ್ಲಿ ನೀರು ತಂದರು.

ಚನ್ನಗಿರಿ ತಾಲೂಕು ಆಸ್ಪತ್ರೆಯಲ್ಲಿ ಲಿಂಗರಾಜ್ 4 ವರ್ಷಗಳಿಂದ ಅಂಬ್ಯುಲೆನ್ಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದ. ಆದರೆ, ಏಕಾಏಕಿ ಕೆಲಸದಿಂದ ತೆಗೆದುಹಾಕಿದ್ದಾರೆ. ಇದರಿಂದ ಜೀವನ ಮಾಡುವುದು ಕಷ್ಟವಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಎಷ್ಟು ಸಲ ಮನವಿ ಮಾಡಿದ್ರು ಯಾವುದೇ ಪ್ರಯೋಜನವಾಗಿಲ್ಲ. ನನ್ನ ಕೆಲಸಕ್ಕೆ ಶಾಸಕರ ಶಿಫಾರಸ್ಸಿನ ಮೇರೆಗೆ ಬೇರೆಯವರಿಗೆ ಕೆಲಸ ಕೊಟ್ಟಿದ್ದಾರೆ. ಹೀಗಾಗಿ ವಿಷ ಕುಡಿಯುತ್ತೇನೆ ಎಂದು ಬೆದರಿಕೆ ಹಾಕಿದ್ದ. ಇದರಿಂದ ಸಿಟ್ಟಿಗೆದ್ದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ನಿಂಗರಾಜ್‍ಗೆ ತರಾಟೆಗೆ ತಗೆದುಕೊಂಡ್ರು. ಬುದ್ದಿವಾದ ಹೇಳಿ ನಿನಗೆ ನ್ಯಾಯ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.



