ಡಿವಿಜಿ ಸುದ್ದಿ, ದಾವಣಗೆರೆ: ನಗರದ ದವನ್ ಕಾಲೇಜಿನ ವಿದ್ಯಾರ್ಥಿಗಳು ಶಾಮನೂರು ಗ್ರಾಮದ ಬಸ್ ನಿಲ್ದಾಣದ ಮುಂಭಾಗದಲ್ಲಿ ಮೂಢನಂಬಿಕೆ ಕುರಿತು ಬೀದಿ ನಾಟಕ ಪ್ರದರ್ಶಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.
ಸ್ಫೂರ್ತಿ ಯೂತ್ ಫೆಸ್ಟ್ -2020 ಪ್ರಯುಕ್ತ ಕಾಲೇಜಿನ ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಹಿಂದಿನ ಕಾಲದಿಂದ ಆಚರಿಸಿಕೊಂಡು ಬರುತ್ತಿರುವ ಮೂಢ ನಂಬಿಕೆ ಇಂದಿಗೂ ಪ್ರಚಲಿತದಲ್ಲಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮ ಮುಖ್ಯ ಉದ್ದೇಶವಾಗಿದೆ.
ನಾಟಕ ಪ್ರದರ್ಶನ ತಂಡದಲ್ಲಿ ಅಂತಿಮ ಬಿ.ಕಾಂ ವಿದ್ಯಾರ್ಥಿಗಳಾದ ಎಸ್. ಎ. ಐಶ್ವರ್ಯ, ಚೈತ್ರ, ಕಿರಣ್ ಜೈನ್, ಪವನ್ ಕುಮಾರ್, ರಾಘವಿ ಎನ್.ಎಸ್, ಸಿಂಧು, ಸುಷ್ಮಾ, ತೇಜಸ್ವಿನಿ ಜಾಗೃತಿ ಮೂಡಿಸಿದರು. ಮಾರ್ಗದರ್ಶಕರಾಗಿ ಆರ್.ವೈ ಶಿಲ್ಪ, ಎನ್.ಸಿ. ರೂಪ, ಅರುಣ್ ಚೌವ್ಹಾಣ್, ಎನ್. ಅನಿತಾ ಉಪಸ್ಥಿತರಿದ್ದರು.



