ಡಿವಿಜಿ ಸುದ್ದಿ,ದಾವಣಗೆರೆ: ನಗರದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ವಿನ್ನರ್ ಕರಿಯರ್ ಅಕಾಡೆಮಿಯ ಮಾರ್ಗದರ್ಶಕ ಶಿವರಾಜ್ ಕಬ್ಬೂರ್ ರವರಿಗೆ ದಾವಣಗೆರೆ ವಿಶ್ವವಿದ್ಯಾನಿಲಯವ 7ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪಿಹೆಚ್ ಡಿ ಪದವಿ ಪ್ರದಾನ ಮಾಡಲಾಯಿತು.
ಶಿವರಾಜ್ ಕಬ್ಬೂರ್ ಶಿಕ್ಷಣ ತಜ್ಞ ಡಾ. ಹೆಚ್. ವಿ ವಾಮದೇವಪ್ಪರವರ ಮಾರ್ಗದರ್ಶನದಲ್ಲಿ ಮಹಾ ಪ್ರಬಂಧ ಮಂಡಿಸಿದ್ದರು. ಇವರು ತಮ್ಮ ಅಕಾಡೆಮಿ ಮೂಲಕ ವಿದ್ಯಾವಂತ ನಿರುದ್ಯೋಗಿಗಳಿಗೆ ಕಳೆದ 12 ವರ್ಷಗಳಿಂದ ತರಬೇತಿ ನೀಡುತ್ತಿದ್ದಾರೆ. ಈ ಮೂಲಕ ನೂರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿರುವುದರಲ್ಲಿ ಯಶಸ್ಸು ಕಂಡಿದ್ದಾರೆ.

ಶಿವರಾಜ್ ಕಬ್ಬೂರ್ ಶಿಕ್ಷಣ ವಿಭಾಗದಲ್ಲಿ ಪಿ.ಹೆಚ್.ಡಿ ಪದವಿ ಪಡೆದಿದ್ದು, ದಾವಣಗೆರೆ ತಾಲ್ಲೂಕಿನ ಕಬ್ಬೂರು ಗ್ರಾಮದ ಕೃಷಿಕ ಚಂದ್ರಶೇಖರಪ್ಪ ಮತ್ತು ಪ್ರೇಮ ದಂಪತಿಯ ದ್ವಿತೀಯ ಪುತ್ರರಾಗಿದ್ದಾರೆ.



