ಡಿವಿಜಿ ಸುದ್ದಿ, ದಾವಣಗೆರೆ: ಡಾ.ಬಿ.ಆರ್. ಅಂಬೇಡ್ಕರ್ ಬಾಬು ಜಗಜೀವನ್ ರಾಂ ಗ್ರಾಮೀಣಾಭಿವೃದ್ಧಿ ಸಂಸ್ಥೆ , ಸಿಂಚನ ಕೋಚಿಂಗ್ ಸೆಂಟರ್ ಹಾಗೂ ವಿ.ಎಸ್. ಪ್ಯಾರಾ ಮೆಡಿಕಲ್ ಕಾಲೇಜ್ ವತಿಯಿಂದ ಅಮೆರಿಕದ ಇಂಟರ್ ನ್ಯಾಷನಲ್ ಗ್ಲೋಬಲ್ ಪೀಸ್ ಯುನಿರ್ವಸಿಟಿಯಿಂದ ಗೌರವ ಡಾಕ್ಟರೇಟ್ ಪಡೆದ ಡಾ. ಶಿವಾನಂದ ದಳವಾಯಿ ಅವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪ್ರೊ. ಅಂಜಿನಪ್ಪ, ಸಿಂಚನ ಕೋಚಿಂಗ್ ಸೆಂಟರ್ ಕಾರ್ಯದರ್ಶಿ ಶ್ವೇತಾ ರಂಘನಾಥ್, ಡಾ.ಬಿ.ಆರ್. ಅಂಬೇಡ್ಕರ್ ಬಾಬು ಜಗಜೀವನ್ ರಾಂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಸ್ಥಾಪಕ ಎನ್. ಮಲ್ಲೇಶ್, ಟಿವಿ9 ವರದಿಗಾರ ಬಸವರಾಜ್ ದೊಡ್ಡಮನಿ, ಸುವರ್ಣ ನ್ಯೂಸ್ ವರದಿಗಾರ ವರದರಾಜ್ ಉಪಸ್ಥಿತರಿದ್ದರು.




