ಡಿವಿಜಿ ಸುದ್ದಿ, ದಾವಣಗೆರೆ: ಭೋವಿ, ಲಂಬಾಣಿ, ಕೊರಚ, ಮತ್ತು ಕೊರಮ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿ ಯಿಂದ ಕೈ ಬಿಡಲಾಗಿದೆ ಎಂಬ ಅಪ ಪ್ರಚಾರ ಮಾಡುತ್ತಿದೆ. ಇದರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಇಂದು ಮುಖ್ಯ ಮಂತ್ರಿ ಬಿ ಎಸ್. ಯಡಿಯೂರಪ್ಪ ನವರಿಗೆ ಅಂಚೆ ಮೂಲಕ ಪತ್ರ ಚಳವಳಿಗೆ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಚಾಲನೆ ನೀಡಿದರು.
ನಗರದ ಗಡಿಯಾರದ ಕಂಬದ ಬಳಿ ಇರುವ ಮುಖ್ಯ ಅಂಚೆ ಕಚೇರಿಯಲ್ಲಿ ಅಂಚೆ ಡಬ್ಬಕ್ಕೆ ಪತ್ರ ಹಾಕುವ ಮೂಲಕ ಚಾಲನೆ ನೀಡಲಾಯಿತು. ನಂತರ ಮಾತನಾಡಿದ ಅವರು, ಮುಖ್ಯ ಮಂತ್ರಿಗಳಿಗೆ ಬರೆದಿರುರುವ ಅಂಚೆ ಪತ್ರದಲ್ಲಿ ಅತ್ಯಂತ ಕಡು ಬಡತನ ಮತ್ತು ಅಸಂಘಟಿತರಾದ ಭೋವಿ, ಲಂಬಾಣಿ, ಕೊರಚ ಮತ್ತು ಕೊರಮ ಸಮಾಜಗಳಿಗೆ ಸಂವಿಧಾನ ಶಿಲ್ಪಿ ಡಾಕ್ಟರ್ .ಬಿ ಆರ್ ಅಂಬೇಡ್ಕರ್ ಹಾಗೂ ಸ್ವಾತಂತ್ರ್ಯ ಪೂರ್ವದಲ್ಲೇ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೀಸಲಾತಿಯನ್ನು ಕಲ್ಪಿಸಿದ್ದಾರೆ.ಆದರೆ, ಕೆಲವರು ಎಸ್ ಸಿ ಪಟ್ಟಿಯಿಂದ ಕೆಲವು ಜಾತಿಯನ್ನು ಕೈ ಬಿಡಲು ಹುನ್ನಾರವನ್ನು ಸತತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇಂತಹ ಸಂವಿಧಾನ ವಿರೋಧಿ ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ಭೋವಿ, ಲಂಬಾಣಿ, ಕೊರಚ ಮತ್ತು ಕೊರಮ ಸಮಾಜಗಳ ರಕ್ಷಣೆಗೆ ಅವರು ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ನವರಲ್ಲಿ ಮನವಿ ಮಾಡಿದರು. ಅಂಚೆ ಪತ್ರ ಚಳವಳಿಯಲ್ಲಿ ಭೋವಿ ಸಮಾಜದ ಮುಖಂಡರಾದ ಹೆಚ್.ಚಂದ್ರಪ್ಪ, ಡಿ.ದೇವರಾಜ್ ಆರ್. ಶ್ರೀನಿವಾಸ, ತಿಪ್ಪೇಶಿ, ಉಮೇಶ್, ಆರ್. ಸುರೇಶ್,ವೈ.ತಿಮ್ಮಶ್,ಎಂ.ಅಶೋಕ, ವೈ.ನಾರಾಯಣ್, ಗೊಲ್ಲರಹಳ್ಳಿ ಶಾಂತರಾಜ್ ,ಹೆಚ್. ನಾಗರಾಜ, ಗಿರಿಧರ್, ಸೋಮಶೇಖರ್ ಈ.ರುದ್ರೇಶ್ ಡಿ.ಕೇಶವಮೂತಿ೯ ಹೆಚ್. ಜಯ್ಯಣ್ಣ ಮತ್ತಿತರರಿದ್ದರು.



