ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಒಂದೇ ದಿನ 351 ಕೊರೊನಾ ಪಾಸಿಟಿವ್ ಕೇಸ್ ಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಒಂದೇ ದಿನ ದಾಖಲಾದ ಅತಿ ಪ್ರಕರಣ ಇದಾಗಿದೆ.
ಜಿಲ್ಲೆಯಲ್ಲಿಂದು 282 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 4,743 ಮಂದಿಯಲ್ಲಿ 3154 ಮಂದಿ ಗುಣಮುಖರಾಗಿದ್ದಾರೆ. ಇಂದು 07 ಮಂದಿ ಕೊರೊನಾದಿಂದ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಮೃತರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇನ್ನು 1,468 ಸಕ್ರಿಯ ಪ್ರಕಣಗಳಿವೆ.
ಇಂದು ಪತ್ತೆಯಾದ ಪಾಸಿಟಿವ್ ಪ್ರಕರಣಗಳಲ್ಲಿ ದಾವಣಗೆರೆಯಲ್ಲಿ ಅಧಿಕ 258, ಹರಿಹರ 46,ಜಗಳೂರು 00,ಚನ್ನಗಿರಿ 15, ಹೊನ್ನಾಳಿ 15 ಹಾಗೂ ಹೊರ ಜಿಲ್ಲೆಯ 17 ಮಂದಿಗೆ ಕೊರೊನಾ ಪತ್ತೆಯಾಗಿದೆ. ದಾವಣಗೆರೆಯ ಬೇತೂರು ರಸ್ತೆಯ 58 ವರ್ಷದ ವೃದ್ಧ, ಮುನೇಶ್ವರ ಬಡಾವಣೆಯ 70 ವರ್ಷದ ವೃದ್ಧ ಹಾಗೂ ಲೆನಿನ್ ನಗರದ 60 ವರ್ಷದ ವೃದ್ಧ, ಜಾಲಿನಗರದ 60 ವರ್ಷದ ಮಹಿಳೆ, ಹೊನ್ನಾಳಿಯ 68 ಹಾಗೂ 70 ವರ್ಷದ ವೃದ್ಧರು ಹಾಗೂ ಹರಿಹರದ ಟಿಪ್ಪುನಗರದ 72 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.



