ಡಿವಿಜಿ ಸುದ್ದಿ, ದಾವಣಗೆರೆ: ಕೋವಿಡ್-19 ಸೋಂಕು ನಿಯಂತ್ರಿಸಲು ಮಾಸ್ಕ್, ಸಾಮಾಜಿಕ ಅಂತರ, ನೈರ್ಮಲ್ಯ ಪಾಲನೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಇಂದು ದಾವಣಗೆರೆ ಜಿಲ್ಲಾ ಬಿ.ಜೆ.ಪಿ.ವತಿಯಿಂದ ‘ಮಾಸ್ಕ್ ದಿನ’ ಆಚರಿಸಲಾಯಿತು.

ಮಾಜಿ ಸಚಿವ, ಶಾಸಕ ಎಸ್ ಎ. ರವೀಂದ್ರನಾಥ್ ಚಾಲನೆ ನೀಡಿದರು. ಮಾಸ್ಕ್ ಧರಿಸಿ, ಮಹಾಮಾರಿ ತೊಲಗಿಸಿ, ನೀವೂ ಧರಿಸಿ, ನಿಮ್ಮ ಆಪ್ತರಿಗೂ ತಿಳಿಸಿ. ಸರ್ಕಾದರ ಮಾರ್ಗಸೂಚಿಯನ್ನು ಎಲ್ಲರೂ ಪಾಲಿಸುವ ಮೂಲಕ ಕೊರೋನಾ ಹಿಮ್ಮೆಟ್ಟಿಸೋಣ ಎಂಬ ಘೋಷಣೆ ಕೂಗಲಾಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಎ.ಎಚ್.ಶಿವಯೋಗಿ ಸ್ವಾಮಿ, ಜಿಲ್ಲಾ ಅಧ್ಯಕ್ಷ ಹನಗವಾಡಿ ವಿರೇಶ್ , ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್, ಉಪ ಮೇಯರ್ ಸೌಮ್ಯ ನರೇಂದ್ರಕುಮಾರ್, ಮಹಾನಗರ ಪಾಲಿಕೆ ಸದಸ್ಯರು, ಉತ್ತರ ಮತ್ತು ದಕ್ಷಿಣದ ಅಧ್ಯಕ್ಷರು, ಮಹಿಳಾ ಅಧ್ಯಕ್ಷರು, ಕಾರ್ಯಕರ್ತರು ಉಪಸ್ಥಿತರಿದ್ದರು.



