ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲೂಕಿನ ಅರಸೀಕೆರೆಯಲ್ಲಿ ಇತ್ತೀಚಿಗೆ ಪೊಲೀಸ್ ಪೇದೆಗೆ ಸೋಂಕು ತಗುಲಿದ್ದರಿಂದ ಇಲ್ಲಿಯ ಠಾಣೆಯ ಸಿಬ್ಬಂದಿಯನ್ನು ನಜೀರ್ ನಗರದಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಇಂದು ಅರಸೀಕೆರೆಯ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಅವರು ಸಿಬ್ಬಂದಿಗಳ ಆರೋಗ್ಯ ವಿಚಾರಿಸಿ,ರೊಟ್ಟಿ, ಪಾಯಸ, ಕೆಂಪು ಚಟ್ನಿ, ದಾಲು, ಮುಳುಗಾಯಿ ಪಲ್ಯ, ಪಲಾವ್ ಊಟದ ವ್ಯವಸ್ಥೆಯನ್ನು ನೀಡಿದರು. ಪೊಲೀಸ್ ಸಿಬ್ಬಂದಿಗಳು ಕೊರೊನಾದಿಂದ ಎದೆಗುಂದಬೇಡಿ, ಧೈರ್ಯವಾಗಿರಿ ಎಂದು ಆಶೀರ್ವದಿಸಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಐ. ಸಲಾಂ, ಲಕ್ಷ್ಮಿ ನಾರಾಯಣ ಶೆಟ್ಟಿ, ಪೊಲೀಸ್ ಸಿಬ್ಬಂದಿ ಹಾಜರಿದ್ದರು.