Connect with us

Dvgsuddi Kannada | online news portal | Kannada news online

ದಾವಣಗೆರೆಯಲ್ಲಿ ಮತ್ತೊಂದು ಕೊರೊನಾ ಪ್ರಕರಣ; ಶಿವನಗರ ಹೊಸ ಕಂಟೈನ್ ಮೆಂಟ್ ಝೋನ್

ಪ್ರಮುಖ ಸುದ್ದಿ

ದಾವಣಗೆರೆಯಲ್ಲಿ ಮತ್ತೊಂದು ಕೊರೊನಾ ಪ್ರಕರಣ; ಶಿವನಗರ ಹೊಸ ಕಂಟೈನ್ ಮೆಂಟ್ ಝೋನ್

ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು 20 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ. ಈ ಸೋಂಕಿತನ ಮನೆಯು ಶಿವನಗರದಲ್ಲಿ ಇದ್ದು, ಈ ಮನೆಯನ್ನು ಎಪಿಸೆಂಟರ್ ಎಂದು ಗುರುತಿಸಿ ಇಲ್ಲಿ ನಿಯಮಾನುಸಾರ ಹೊಸ ಕಂಟೈನ್‍ಮೆಂಟ್ ಝೋನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು , ರೋಗಿ ಸಂಖ್ಯೆ 847 ಅಜ್ಮೇರ್‍ಗೆ ಹೋಗಿರುವ ಪ್ರವಾಸ ಇತಿಹಾಸ ಹೊಂದಿದ್ದಾರೆ. ಮಾರ್ಚ್ 20 ಕ್ಕೆ ಪುಣೆಗೆ ಹೋಗಿ ಅಲ್ಲಿ ಬಾಡಿಗೆ ಮನೆಯಲ್ಲಿದ್ದು ಮೇ 1 ಕ್ಕೆ ಅಜ್ಮೇರ್‍ಗೆ ಹೋಗಿರುತ್ತಾರೆ. ದಾವಣಗೆರೆಗೆ ಮೇ 3 ಕ್ಕೆ ಬಂದಿರುತ್ತಾರೆ.

ಮೇ 5 ರಂದು ಈತನ ಗಂಟಲುದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು ಇಂದು ಫಲಿತಾಂಶ ಪಾಸಿಟಿವ್ ಎಂದು ಬಂದಿದೆ. ಇವರೊಂದಿಗೆ ಪ್ರವಾಸ ಇತಿಹಾಸವಿದ್ದ ಒಟ್ಟು 16 ಜನರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಇವರನ್ನು ಹೊರತುಪಡಿಸಿ 15 ಜನರ ಫಲಿತಾಂಶ ನೆಗೆಟಿವ್ ಬಂದಿದೆ. ಅವರೆಲ್ಲರನ್ನೂ ನರಹರಿಶೇಟ್ ಕಲ್ಯಾಣ ಮಂಟಪದಲ್ಲಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಡಲಾಗಿದೆ ಎಂದರು.

ರೋಗಿ ಸಂಖ್ಯೆ 847 ರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಡಲಾಗಿದ್ದು, ದ್ವಿತೀಯ ಇದೀಗ 18 ಜನರನ್ನು ಟ್ರೇಸ್ ಮಾಡಲಾಗಿದೆ. ಈ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದ್ದು, ಇವರೆಲ್ಲರನ್ನೂ ಕ್ವಾರಂಟೈನ್ ಮಾಡಿ ಪರೀಕ್ಷೆಗೆ ಒಳಪಡಿಸಲಾಗುವುದು.

ಜಿಲ್ಲೆಯಲ್ಲಿ ಇಂದು 199 ವರದಿಗಳು ನೆಗೆಟಿವ್ ಬಂದಿದ್ದು, 201 ವರದಿಗಳು ಬಾಕಿ ಇವೆ. ಇಂದು ಹೊಸದಾಗಿ 164 ಜನರ ಗಂಟಲುದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಎಸ್‍ಎಸ್ ಹೈಟೆಕ್ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಲು ಸಿದ್ದವಾಗಿರುವ ಲ್ಯಾಬ್‍ಗೆ ಅಗತ್ಯ ಕಿಟ್‍ಗಳನ್ನು ತರಲು ಸರ್ಕಾರದ ಕಾರ್ಯದರ್ಶಿಗಳ ಸೂಚನೆ ಮೇರೆಗೆ ದಾವಣಗೆರೆಯಿಂದ ವಾಹನ ಬೆಂಗಳೂರಿಗೆ ತೆರಳಿದ್ದು ನಾಳೆ ಕಿಟ್ಸ್ ದೊರೆಯಲಿವೆ. ನಾಳೆಯಿಂದಲೇ ಸರ್ಕಾರ ನಿಗದಿಪಡಿಸಿದ ದರದಂತೆ ಇಲ್ಲಿಯೇ ಕೋವಿಡ್ ಪರೀಕ್ಷೆ ಆರಂಭಿಸಲಾಗುವುದು.

ಇನ್ನು ಸಿಜಿ ಆಸ್ಪತ್ರೆಯಲ್ಲಿ ಆರ್‍ಟಿಪಿಸಿಆರ್ ಮಷೀನ್‍ಗಳನ್ನು ಅಳವಡಿಸಲು ಸಿವಿಲ್ ಕಾಮಗಾರಿಗಳನ್ನು ನಾಳೆಯಿಂದಲೇ ಆರಂಭಿಸಲಾಗುವುದು. ಇನ್ನೊಂದು ವಾರದಲ್ಲಿ ಲ್ಯಾಬ್ ಸಿದ್ದಗೊಳ್ಳುವ ಭರವಸೆ ಇದ್ದು, ಶೀಘ್ರದಲ್ಲಿ ಲ್ಯಾಬ್ ಸಿದ್ದಪಡಿಸುವ ಕುರಿತಾಗಿ ಎಲ್ಲ ಪ್ರಯತ್ನ ಪ್ರಗತಿಯಲ್ಲಿದೆ ಎಂದರು.

ಇನ್ನು ಕೆಲವು ಮಾಧ್ಯಮದಲ್ಲಿ ಹೊನ್ನಾಳಿಯಲ್ಲಿ ಕ್ವಾರಂಟೈನ್ ಇದ್ದ ಕೆಲವರು ತಪ್ಪಿಸಿಕೊಂಡು ಹೋಗಿದ್ದಾರೆಂದು ಸುದ್ದಿ ಬಿತ್ತರವಾಗುತ್ತಿದೆ. ಆದರೆ ಸತ್ಯವಲ್ಲ. ಹೊನ್ನಾಳಿಯಲ್ಲಿ ಒಟ್ಟು 8 ಜನರನ್ನು ಐಸೊಲೇಷನ್‍ನಲ್ಲಿ ಇರಿಸಲಾಗಿದ್ದು, ಅವರಲ್ಲಿ ಯಾರೂ ತಪ್ಪಿಸಿಕೊಂಡು ಎಲ್ಲೂ ಹೋಗಿಲ್ಲ. ಅವರ ಗಂಟಲುದ್ರವ ಮಾದರಿಯನ್ನೂ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಒಟ್ಟು 68 ಕೊರೊನಾ ಪ್ರಕರಣಗಳಿದ್ದು, ಅದರಲ್ಲಿ 4 ಸೋಂಕಿತರು ಮೃತಪಟ್ಟಿದ್ದಾರೆ. ಇಬ್ಬರು  ಗುಣಮುಖರಾಗಿದ್ದು, ಇನ್ನು 62 ಪ್ರಕರಣಗಳು ಜಿಲ್ಲೆಯಲ್ಲಿ ಸಕ್ರಿಯವಾಗಿವೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top