ಡಿವಿಜಿ ಸುದ್ದಿ, ದಾವಣಗೆರೆ: ನಗರದ ಶಿವಕುಮಾರಸ್ವಾಮಿ ಬಡಾವಣೆಯಲ್ಲಿ ಯುವಕನೊಬ್ಬನಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಶಿವಕುಮಾರಸ್ವಾಮಿ ಬಡಾವಣೆ 14ನೇ ಕಂಟೈನ್ ಮೆಂಟ್ ವಲಯವಾಗಿದೆ.
ಶಿವಕುಮಾರಸ್ವಾಮಿ ಬಡಾವಣೆಯ ನಿವಾಸಿಯ ಮನೆಯ ಸುತ್ತಲಿನ ಪ್ರದೇಶವನ್ನು ಮಾತ್ರ ಕಂಟೈನ್ ಮೆಂಟ್ ವಲಯವಾಗಿ ಮಾಡಿದ್ದು, ಸೀಲ್ ಡೌನ್ ಮಾಡಲಾಗಿದೆ. ಶುಕ್ರವಾರ ಪತ್ತೆಯಾದ ಮೂರು ಪ್ರಕರಣದಲ್ಲಿ ಶಿವಕುಮಾರಸ್ವಾಮಿ ಬಡಾವಣೆಯ ನಿವಾಸಿಯೂ ಒಬ್ಬರಾಗಿದ್ದಾರೆ. ಈ ಪ್ರದೇಶಕ್ಕೆ ತಾಲ್ಲೂಕು ಪಂಚಾಯ್ತಿ ಇಒ ದಾರುಕೇಶ್ ಅವರು ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಕವಾಗಿದ್ದಾರೆ.
ಜಿಲ್ಲೆ ಒಟ್ಟು 125 ಸೋಂಕಿತರು ಪತ್ತೆಯಾಗಿದ್ದು, ಅದರಲ್ಲಿ 46 ಜನ ಗುಣಮುಖರಾಗಿದ್ದಾರೆ. ನಾಲ್ಕು ಜನ ಮೃತಪಟ್ಟಿದ್ದು, ಸದ್ಯ ಜಿಲ್ಲೆಯಲ್ಲಿ 75 ಪ್ರಕರಣಗಳು ಸಕ್ರಿಯವಾಗಿವೆ.