ಡಿವಿಜಿ ಸುದ್ದಿ, ದಾವಣಗೆರೆ : ಕೋವಿಡ್-19 ವೈರಾಣು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಆದೇಶ ಹಿನ್ನೆಲೆ 60 ವರ್ಷ ಮೇಲ್ಪಟ್ಟವರು ಆರ್ ಟಿಓ ಕಚೇರಿಯ ಯಾವುದೇ ಕೆಲಸಗಳಿಗೆ ಬರುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.
ಕಚೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ತಮ್ಮ ಕೆಲಸಗಳಿಗೆ ಆಗಮಿಸುತ್ತಿದ್ದಾರೆ. ಡಿ.ಎಲ್ ನವೀಕರಣ ಮತ್ತು ಡಿ.ಎಲ್ ಗೆ ಸಂಬಂಧಿಸಿದ ಇತರೆ ಕೆಲಸಗಳಿಗೆ ಸಂಬಂಧಿಸಿದಂತೆ ಡಿಜಿಟಲ್ ಸಹಿ ಮತ್ತು ಬಯೋಮೆಟ್ರಿಕ್ ಇರುವುದರಿಂದ ಸುರಕ್ಷತೆಯ ದೃಷ್ಟಿಯಿಂದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಡಿ.ಎಲ್ ಹಾಗೂ ಇತರೆ ಸೇವೆಗಳಿಗೆ ಹಾಜರಾಗದಂತೆ ತಿಳಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಜಿ.ಎಸ್.ಹೆಗಡೆ ತಿಳಿಸಿದ್ದಾರೆ.
ದಿನಾಂಕ: 01-02-2020 ರ ನಂತರ ಅವಧಿ ಮುಕ್ತಾಯಗೊಳ್ಳುವ ವಾಯಿದೆಯನ್ನು ಸಿಂಧುತ್ವ ಹೊಂದಿದ ಅವಧಿ ಎಂದು ಪರಿಗಣಿಸಿ ದಿ: 30-09-2020 ರವರೆಗೆ ವಿಸ್ತರಿಸಲಾಗಿರುತ್ತದೆ. (ಅರ್ಹತಾ ನವೀಕರಣ, ಪರವಾನಿಗೆ, ಎಲ್.ಎಲ್, ಡಿ.ಎಲ್, ನೋಂದಣಿ ವಾಹನಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಇತರೆ)



