ಡಿವಿಜಿ ಸುದ್ದಿ, ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಕೊರೊನಾ ವೈರಸ್ ಗೆ ತತ್ತರಿಸಿ ಹೋಗಿದೆ. 330 ಸ್ಯಾಂಪಲ್ ಗಳ ಪೈಕಿ 37 ವರದಿ ಬಂದಿದ್ದು, ಅದರಲ್ಲಿ 21 ಕೊರೊನಾ ಪಾಸಿಟಿವ್ ಕೇಸ್ ಗಳು ಬಂದಿವೆ.
ಕೇವಲ 37 ರಲ್ಲಿಯೇ 21ಕೇಸ್ ಗಳು ಪಾಸಿಟಿವ್ ಬಂದಿರುವುದು. ಜಿಲ್ಲೆಯಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಎರಡು ದಿನಗಳ ಹಿಂದೆ 84, ನಿನ್ನೆ 72 ಇಂದು 164 ಸ್ಯಾಂಪಲ್ ಕಳುಹಿಸಲಾಗಿತ್ತು.
ಇಂದು 21 ಪಾಸಿಟಿವ್ ಪ್ರಕರಣ ಬಂದ ಹಿನ್ನೆಲೆಯಲ್ಲಿ ತುರ್ತು ಸಭೆ ಕರೆಯಲಾಗಿದೆ. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಎಮರ್ಜೆನ್ಸಿ ಮೀಟಿಂಗ್ ನಡೆದಿದೆ. ಸಂಸದ ಜಿ. ಎಂ.ಸಿದ್ದೇಶ್ವರ್ , ಡಿಸಿ ಮಹಾಂತೇಶ್ ಆರ್. ಬೀಳಗಿ, ಎಸ್ಪಿ ಹನುಮಂತರಾಯ ಸೇರಿದಂತೆ ಅಧಿಕಾರಿಗಳು ಭಾಗಿಯಾಗಿದ್ದರು.
ಜಿಲ್ಲೆಯಲ್ಲಿ ಒಂದೇ ದಿನ ಇಷ್ಟು ಪ್ರಕರಣ ಹೆಚ್ಚಾಗಿರುವುದಕ್ಕೆ ದಾವಣಗೆರೆ ಸಂಪೂರ್ಣ ಸೀಲ್ ಡೌನ್ ಆಗಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮಾಹಿತಿ ನೀಡಿದ್ದಾರೆ.
ಸಭೆ ಬಳಿಕ ಸಂಸದ ಜಿ. ಎಂ. ಸಿದ್ದೇಶ್ವರ್ ಮಾತನಾಡಿ, ದಾವಣಗೆರೆಯಲ್ಲಿ ಒಂದೇ ದಿನ 21ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವುದರಿಂದ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ. ಯಾರು ಕೂಡ ಅಂಗಡಿ ತೆರೆಯುವಂತಿಲ್ಲ. ದಾವಣಗೆರೆ ರೆಡ್ ಜೋನ್ ಬರಲಿದೆ .ಇಡೀ ದಾವಣಗೆರೆ ಕಂಟೈನ್ ಮೆಂಟ್ ಜೋನ್ ಆಗಲಿದೆ. ಯಾವುದೆ ಧವಸ ಧಾನ್ಯ ಸಿಗುವುದಿಲ್ಲ, ಆನ್ ಲೈನ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.