ಡಿವಿಜಿ ಸುದ್ದಿ, ಹೊನ್ನಾಳಿ: ಯಾರೂ ಕೂಡ ಕೊರೊನಾ ಬಂತೆoದು ಎದೆಗುಂದುವ ಅಗತ್ಯವಿಲ್ಲವೆಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಕುಂದೂರು ಗ್ರಾಮದಲ್ಲಿನ ಕಂಟೈನ್ಮೆಂಟ್ ಝೋನ್‌ಗೆಗಳಿಗೆ ಭೇಟಿ ನೀಡಿ, 33 ಕುಟುಂಬಗಳಿಗೆ ಅಗತ್ಯ ಫುಡ್ ಕಿಟ್‌ಗಳನ್ನು ನೀಡಿ ಆತ್ಮಸ್ಥೈರ್ಯ ತುಂಬಿದರು. ಕೊರೊನಾದಂತಹ ಸಂಕಷ್ಟ ಸಂದರ್ಭದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸ ಬೇಕಾಗಿದ್ದು ನನ್ನ ಕರ್ತವ್ಯ. ಈ ಹಿನ್ನೆಲೆಯಲ್ಲಿ ಸೀಲ್‌ಡೌನ್ ಮಾಡಿದ ಮನೆಗಳಿಗೆ ನನ್ನ ಕೈಲಾದಷ್ಟು ಮಟ್ಟಿಗೆ ಫುಡ್‌ಕಿಟ್ ವಿತರಿಸುತ್ತಿದ್ದೇನೆ ಎಂದರು.
ಕೊರೊನಾ ಆಕಸ್ಮಿಕವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿದ್ದು, ನಾವು ಆತ್ಮಸ್ಥೈರ್ಯದಿಂದ ಅದನ್ನು ಎದರಿಸಬೇಕಿದೆ. ಕೊರೊನಾಗೆ ಯಾರನ್ನು ಬಿಡುತ್ತಿಲ್ಲಾ. ಬಡವ ಶ್ರೀಮಂತ ಎಲ್ಲರಿಗೂ ಕೊರೊನಾ ಪಾಸಿಟಿವ್ ಪತ್ತೆಯಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಮಂತ್ರಿಗಳು, ಸಂಸದರು, ಶಾಸಕರಿಗೂ ಕೊರೊನಾ ಪಾಸಿಟಿವ್ ಪತ್ತೆಯಾಗುತ್ತಿದೆ. ಹಾಗಂತ ಜನರು ಯಾರೂ ಭಯಪಡಬೇಕಿಲ್ಲ. ನಾವು ಆತ್ಮಸ್ಥೈರ್ಯದಿಂದ ಇದ್ದರೆ, ಅದು ನಮ್ಮ ಬಳಿ ಸುಳಿಯುವುದಿಲ್ಲ ಎಂದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಾ ಜಗದೀಶ್, ತಾಲೂಕು ಪಂಚಾಯಿತಿ ಸದಸ್ಯ ತಿಪ್ಪೇಶಪ್ಪ, ಸಿದ್ದನಗೌಡ, ಕೊಂಬ್ರೀಮoಜಪ್ಪ, ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.



