ಡಿವಿಜಿ ಸುದ್ದಿ, ದಾವಣಗೆರೆ: ನಿನ್ನೆ ತಡ ರಾತ್ರಿ ದಾವಣಗೆರೆ ಯಲ್ಲಿ ಮತ್ತೊಂದು ಕೊರೊನೊ ಪಾಸಿಟಿವ್ ಪತ್ತೆಯಾಗಿದೆ. ಜಾಲಿ ನಗರ ನಿವಾಸಿಯಾದ 69 ವರ್ಷದ ವೃದ್ಧನಿಗೆ ಏ. 28ರಂದು ಸಿಜಿ ಆಸ್ಪತ್ರೆಗೆ ದಾಖಲಾಗಿದ್ದು, ತಡ ರಾತ್ರಿ ಕೊರೊನಾ ಪಾಸಿಟಿವ್ ಧೃಡಪಟ್ಟಿದೆ.
ವೃದ್ಧನ ಗಂಟಲು ದ್ರವವನ್ನು ಪುಣೆ ಹಾಗು ಶಿವಮೊಗ್ಗ ಲ್ಯಾಬ್ ಕಳುಹಿಸಲಾಗಿತ್ತು. ಎರಡು ಲ್ಯಾಬ್ ನಿಂದ ಬಂದ ವರದಿಯಲ್ಲಿ ಪಾಸಿಟಿವ್ ಬಂದಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದ 9 ಜನ ಕ್ವಾರಂಟೈನ್ ಇಡಲಾಗಿದೆ. ದ್ವಿತೀಯ ಸಂಪರ್ಕದಲ್ಲಿದ್ದವರಿಗಾಗಿ ಹುಡುಕಾಟ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ದಾರೆ.
ವೃದ್ಧನ ಟ್ರಾವಲ್ ಇಸ್ಟರಿ ಬಗ್ಗೆ ತನಿಖೆ ಮಾಡಲಾಗುತ್ತಿದೆ . ವೃದ್ಧನಿಗೆ ಹೇಗೆ ಸೊಂಕು ತಗುಲಿದೆ ಎಂಬುದು ನಿಗೂಢವಾಗಿದೆ. ಗ್ರೀನ್ ಜೋನ್ ನಲ್ಲಿದ್ದ ದಾವಣಗೆರೆಗೆ ನಿನ್ನೆಯಿಂದ ಎರಡನೇ ಪ್ರಕರಣ ಇದಾಗಿದೆ. ಕಳೆದ 30 ದಿನಗಳ ನಂತರ ನಗರದಲ್ಲಿ ಸತತವಾಗಿ ಎರಡು ಪ್ರಕರಣ ಪತ್ತೆಯಾಗಿವೆ.
ನಿನ್ನೆಯಷ್ಟೇ ಭಾಷಾನಗರದ ನರ್ಸ್ ಒಬ್ಬರಿಗೆ ಕೊರನಾ ಪಾಸಿಟಿವ್ ಪತ್ತೆಯಾಗಿತ್ತು. ಇದೀಗ ಜಾಲಿನಗರ ನಿವಾಸಿ ವೃದ್ಧನಿಗೆ ಪಾಸಿಟಿವ್ ಪತ್ತೆಯಾಗಿದೆ. ಹೀಗಾಗಿ ದಾವಣಗೆರೆಯ ಭಾಷಾನಗರ, ಜಾಲಿನಗರ ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ.



