ಡಿವಿಜಿ ಸುದ್ದಿ, ದಾವಣಗೆರೆ: ಲಾಕ್ ಡೌನ್ ಹಿನ್ನೆಲೆ ಜನ ಸಾಮಾನ್ಯರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ವಕ್ತಾರ ನಿಖಿಲ್ ಕೊಂಡಜ್ಜಿ ರೈತರಿಂದ ನೇರವಾಗಿ ಖರೀದಿಸಿದ 6 ಸಾವಿರ ಕೆಜಿ ತರಕಾರಿಯನ್ನು, 1500 ಕಿಟ್ ಗಳನ್ನಾಗಿ ತಯಾರಿಸಿ ಹರಿಹರ ತಾಲ್ಲೂಕಿನ ಬಡ ಕುಟುಂಬಗಳಿಗೆ ವಿತರಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹರಿಹರ ತಾಲ್ಲೂಕಿನ ಕೊಂಡಜ್ಜಿ, ಬುಳ್ಳಾಪುರ, ಕೆಂಚನಹಳ್ಳಿ ಗ್ರಾಮದ ರೈತರಿಂದ ತರಕಾರಿ ಖರೀದಿಸಿ ತಾಲ್ಲೂಕಿನ ಬಡ ಕುಟುಂಬಗಳಿಗೆ ಹಂಚಿದರು.




