ಡಿವಿಜಿ ಸುದ್ದಿ, ಹರಿಹರ: ಹರಿಹರ ತಾಲ್ಲೂಕಿನ ನಂದಿಗಾವಿ, ಜಿಗಳಿ ಗ್ರಾಮದಲ್ಲಿ ಶ್ರೀನಿವಾಸ್ ಗೆಳೆಯರ ಬಳಗದಿಂದ ಮಾಸ್ಕ್ ವಿತರಣೆ ಮಾಡಲಾಯಿತು.
ಇಡೀ ದೇಶದಲ್ಲಿ ಕೊರೊನಾ ವೈರಸ್ ನಿಂದ ಲಾಕ್ ಡೌನ್ ಆಗಿದ್ದು, ಪ್ರತಿ ಹಳ್ಳಿಯಲ್ಲಿ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಹರಿಹರ ತಾಲ್ಲೂಕಿನ ಜಿಗಳಿ, ನಂದಿಗಾವಿಯಲ್ಲಿ 15 ಸಾವಿರ ಮಾಸ್ಕ್ ವಿತರಿಸಲಾಯಿತು.

ಕೊರೊನಾ ಕುರಿತು ಕರ ಪತ್ರ ಜೊತೆಗೆ, ಸ್ಯಾನಿಟೈಸರ್ ಹಂಚಿಕೆ. ಊಟ, ಹಣ್ಣು, 700 ಆಹಾರದ ಕಿಟ್ ವಿತರಣೆ, ಆಟೋ ಚಾಲಕರಿಗೆ, ಪತ್ರಿಕೆ ಹಂಚಿಕೆ ಮಾಡುವ ಹುಡುಗರಿಗೆ ಸಹಾಯ ಮಾಡಲಾಗುತ್ತಿದೆ. ಶ್ರೀನಿವಾಸ್ ಅವರ ಸೇವೆಗೆ ತಹಶೀಲ್ದಾರ್ ರಾಮಚಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



