ಡಿವಿಜಿ ಸುದ್ದಿ, ದಾವಣಗೆರೆ: ಸಂತ ಅಲೋಶಿಯಸ್ ಕಾಲೇಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಸಹಕಾರದೊಂದಿಗೆ ದಾವಣಗೆರೆಯ ಜಾಲಿ ನಗರ ಮತ್ತು ವಿನಾಯಕ ನಗರ ಕಂಟೈನ್ಮೆಂಟ್ ಜೋನ್ ನಲ್ಲಿ ರುವ 400 ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಮುಖ್ಯಸ್ಥ ಫಾದರ್ ಏರಿಕ್ ಮತಾಯಸ್, ಫಾದರ್ ರಾಯಪ್ಪ, ಉಪಪ್ರಾಂಶುಪಾಲರಾದ ಪುಷ್ಪಲತಾ ಅರಸ್ ಮತ್ತು ಪ್ರಿನ್ಸಿ ಪ್ಲಾವಿಯಾ ಪಿಂಟೂ, ಮಂಜುನಾಥ್ ಟಿ.ಎಸ್. ಮೌಸಿನ್ ಉಲ್ಲಾ, ಶಿವಕುಮಾರ್ ಎಂ. ಬಿ ದಾವಣಗೆರೆ ಉತ್ತರ ವಲಯದ ಸರ್ಕಲ್ ಇನ್ಸ್ಪೆಕ್ಟರ್ ಕೆ.ಎಂ ಗಜೇಂದ್ರಪ್ಪ ಆಜಾದ್ ನಗರ ಪೊಲೀಸ್ ಸಬ್ಇನ್ಸ್ಪೆಕ್ಟರ್ ಶೈಲಜಾ ಹಾಗೂ ಸಿಬ್ಬಂದಿ, ಬಸವ ನಗರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಾಗರಾಜ್ ಹಾಗೂ ಸಿಬ್ಬಂದಿ, ಜಾಲಿ ನಗರ 8ನೇ ವಾರ್ಡ್ ಕಾರ್ಪೊರೇಟರ್ ಸಂತೋಷ್ ಕುಮಾರ್, ಜಾಲಿನಗರ 7ನೇ ವಾರ್ಡ್ ಕಾರ್ಪೊರೇಟರ್ ವಿನಾಯಕ ಪೈಲ್ವಾನ್, ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮತ್ತು ಅವರ ಸಿಬ್ಬಂದಿ ಉಪಸ್ಥತಿರಿದ್ದರು.



