ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆಯಲ್ಲಿ ಇಂದು 3 ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಅದರಲ್ಲಿ ರೋಗಿ ಸಂಖ್ಯೆ 976 32 ವರ್ಷದ ಪುರುಷ ಆಗಿದ್ದು ಶೀತ, ಜ್ವರದಿಂದ ಪಾಸಿಟಿವ್ ಬಂದಿದೆ. ಈ ವ್ಯಕ್ತಿ ಬೆಳ್ಳುಳ್ಳಿ ವ್ಯಾಪಾರಿಯಾಗಿದ್ದು, ಪಿಜೆ ಬಡಾವಣೆಯ ನಿವಾಸಿಯಾಗಿದ್ಧಾನೆ. ಹೀಗಾಗಿ ಪಿಜೆ ಬಡಾವಣೆಯ ರೈತರ ಬೀದಿಯನ್ನು 8ನೇ ಕಂಟೈನ್‍ಮೆಂಟ್ ಝೋನ್ ಆಗಿದೆ. ಈಗಾಗಲೇ ಸರ್ವೇ ಕಾರ್ಯ ನಡೆದ್ದು, ಬ್ಯಾರಿಕೇಡ್ ಹಾಕಲಾಗಿದೆ ಎಂದು ಎಸ್ ಪಿ ಹನುಮಂತರಾಯ ಮಾಹಿತಿ ನೀಡಿದರು.
ಶೀತ ಜ್ವರದಿಂದ ಪಾಸಿಟಿವ್ ಬಂದಿರುವುದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರವಾದ ಅಧ್ಯಯನ ಅವಶ್ಯಕತೆ ಇದೆ. ಈ ರೋಗಿಗೆ ಹೇಗೆ ಸೋಂಕು ತಗುಲಿರಬಹುದು ಎಂದು ಸ್ಟಡಿ ಮಾಡಬೇಕಿದೆ. ಎಲ್ಲಿಂದ ಬೆಳ್ಳುಳ್ಳಿ, ಈರುಳ್ಳಿ ತರುತ್ತಿದ್ದ ಹಾಗೂ ಎಪಿಎಂಸಿಗೆ ಬೇರೆ ಪ್ರದೇಶಗಳಿಂದ ಬರುವ ಮೂಲ ಪತ್ತೆ ಹಚ್ಚಬೇಕಾಗಿದೆ ಎಂದರು.
ಕಂಟೈನ್‍ಮೆಂಟ್ ಝೋನ್‍ನಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಗಳಿಗೆ ಫೇಸ್‍ಶೀಲ್ಡ್, ಟ್ರಿಪಲ್ ಲೇಯರ್ ಮಾಸ್ಕ್, ಗ್ಲೊವ್ಸ್, ಸ್ಯಾನಿಟೈಸರ್ ಒದಗಿಸುತ್ತಿದ್ದೇವೆ. ಜಿಲ್ಲಾಡಳಿತ ಸಹ ಪಿಪಿಇ ಕಿಟ್‍ಗಳನ್ನು ನೀಡುತ್ತಿದೆ. ವೈಯಕ್ತಿಕವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಹಾಗೂ ಮನೆಗೆ ಬಂದ ಮೇಲೆ ಹೇಗೆ ಪ್ರೊಟೊಕಾಲ್ ನಿರ್ವಹಿಸಬೇಕೆಂದು ಅರಿವು ಮೂಡಿಸಲಾಗಿದೆ. ಹಾಗೂ ಆಯುಷ್ ಇಲಾಖೆಯಿಂದ ಆರ್ಸ್ ಆಲ್ಬಾ ಎಂಬ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಯನ್ನು ಜೊತೆಗೆ ಚ್ಯವನ್‍ಪ್ರಾಶ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಮಾತನಾಡಿ, ಕೊರೊನಾ ನಿಯಂತ್ರಣ ಹಿನ್ನೆಲೆ ಜಿಲ್ಲಾಡಳಿತ ಹಾಗೂ ಪಾಲಿಕೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವರ್ತಕರು ಕೊರೊನಾಗೆ ಕಾರಣವಾದರೆ ಅವರೇ ಹಣ ಭರಿಸಬೇಕಯ ಎಂಬ ಸುದ್ದಿ ಹರಿದಾಡುತ್ತಿದೆ ಎಂಬ ಪ್ರಶ್ನೆಗೆ ಅವರು ಉತ್ತರಿಸಿ ಸ್ವಯಂ ಘೊಷಿತ ಮುಚ್ಚಳಿಕೆ ನೀಡುವಂತೆ ತಿಳಿಸಿದ್ದೇವೆ ಹೊರತು ಹಣ ಭರಿಸುವಂತೆ ತಿಳಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ ಇದ್ದರು.



