ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆಯಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿನ್ನೆ 18 ಜನ ಗುಣಮುಖರಾಗಿದ್ದು, ಇಂದು ಮತ್ತೆ 4 ಜನ ಕೊರೊನಾದಿಂದ ಗುಣಮುಖರಾಗಿ ಮನೆ ಸೇರಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 125 ಕೊರೊನಾ ಪಾಸಿಟಿವ್ ಪ್ರಕಣಗಳು ದಾಖಲಾಗಿದ್ದು, ಅದರಲ್ಲಿ 4 ಜನ ಮೃತಪಟ್ಟಿದ್ದಾರೆ. ಇಂದು ಬಿಡುಗಡೆಯಾದ 4 ಜನ ಸೇರಿದಂತೆ ಒಟ್ಟು 50 ಡಿಸ್ಚಾರ್ಜ್ ಆದಂತಾಗಿದೆ. ಈ ಮೂಲಕ ಸದ್ಯ ಜಿಲ್ಲೆಯಲ್ಲಿ ಒಟ್ಟು 71 ಪ್ರಕರಣಗಳು ಜಿಲ್ಲೆಯಲ್ಲಿ ಸಕ್ರಿಯವಾಗಿವೆ.
ಪಿ-630, ಪಿ-631, ಪಿ-755, ಪಿ-668 ಇಂದು ಬಿಡುಗಡೆ ಹೊಂದಿದವರಾಗಿದ್ದಾರೆ. ಈ ಬಗ್ಗೆ ಕರ್ನಾಕಟ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ನೀಡಿದೆ.