ಡಿವಿಜಿ ಸುದ್ದಿ, ದಾವಣಗೆರೆ: ಕಳೆದ 15 ದಿನಗಳಿಂದ ದಾವಣಗೆರೆ ಜಿಲ್ಲೆಗೆ ಬಿಟ್ಟು ಬಿಡದೆ ಕಾಡುತ್ತಿರುವ ಕೊರೊನಾಗೆ ಇಂದು ಕೂಡ, 3 ಪಾಸಿಟಿವ್ ಪತ್ತೆಯಾಗಿದೆ.
ದಾವಣಗೆರೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಪಾಸಿಟಿವ್ ನಡುವೆಯೂ ಆರ್ಥಿಕ ಚಟುವಟಿಕೆಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಇದರಿಂದ ಜನರಲ್ಲಿ ಇನ್ನಷ್ಟು ಆತಂಕ ಮೂಡಿಸಿದೆ. ಕಳೆದ ತಿಂಗಳು ಏಪ್ರಿಲ್ 29 ರಂದು ಗ್ರೀನ್ ಜೋನ್ ನಲ್ಲಿದ್ದ ದಾವಣಗೆರೆಯಲ್ಲಿ ಬಾಷಾನಗರದ ನರ್ಸ್ ಪತ್ತೆಯಾಯಿತು, ಇದಾದ ನಂತರ ಜಾಲಿನಗರ ವೃದ್ಧನನಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಈ ಎರಡು ಪ್ರಕಣ ನಂತರ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪ್ರಕರಣ ಹೆಚ್ಚುತ್ತಾಲೇ ಸಾಗಿದ್ದು, ಇದೀಗ ದಾವಣಗೆರೆ ಜಿಲ್ಲೆ ರೆಡ್ ಝೋನ್ ಗೆ ಬಂದಿದ್ದು, ಸೋಂಕಿತರ ಸಂಖ್ಯೆ 88ಕ್ಕೆ ಏರಿಕೆಯಾಗಿದೆ.
ಜಾಲಿನಗರ ಒಂದರಲ್ಲಿಯೇ 50 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಇಂದು ಪತ್ತೆಯಾದ 3 ಪಾಸಿಟಿವ್ ಕೇಸ್ ನಲ್ಲಿ 34 ವರ್ಷದ ಟ್ರಾಫಿಕ್ ಪೊಲೀಸ್ ಪೇದೆಗೆ ಪಾಸಿಟಿವ್ ಪತ್ತೆಯಾಗಿದೆ. ಪಿ-852 ಸಂಪರ್ಕ ಹೊಂದಿದ್ದ 40 ರ್ವಷದ ಪುರುಷ ಹಾಗೂ ಜ್ವರದಿಂದ ಬಳಲುತ್ತಿರುವ 32 ವರ್ಷದ ಪುರುಷನಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 88 ಕೊರೊನಾ ಪಾಸಿಟಿವ್ ಸಂಪರ್ಕ ಪತ್ತೆಯಾಗಿದ್ದು, 4 ಸೋಂಕಿತರು ಮೃತಪಟ್ಟಿದ್ದಾರೆ. 2 ಗುಣಮುಖರಾಗಿದ್ದಾರೆ. ಇನ್ನು 81 ಸಕ್ರಿಯ ಕೇಸ್ ಗಳು ಜಿಲ್ಲೆಯಲ್ಲಿವೆ.



