ನವದೆಹಲಿ: ದೇಶದಲ್ಲಿ ಒಂದೇ ದಿನ 69,652 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, 977 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ಒಟ್ಟು 28,36,926 ಕೊರೊನಾ ವೈರಸ್ ಸೋಂಕುಗಳಿದ್ದು, 20,96,665 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 53,866 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,86,395ಕ್ಕೆ ಏರಿಕೆಯಾಗಿದೆ.
COVID-19 Testing Update . For more details visit: https://t.co/dI1pqvXAsZ @MoHFW_INDIA @DeptHealthRes #ICMRFIGHTSCOVID19 #IndiaFightsCOVID19 #CoronaUpdatesInIndia #COVID19 pic.twitter.com/IrZsbuZvgJ
— ICMR (@ICMRDELHI) August 20, 2020
ರಾಜಧಾನಿ ದೆಹಲಿಯಲ್ಲಿ 11,137 ಸಕ್ರಿಯ ಪ್ರಕರಣಗಳಿದ್ದು, 1,40,767 ಮಂದಿ ಗುಣಮುಖರಾಗಿದ್ದಾರೆ. ಈವರೆಗೂ ಸೋಂಕಿನಿಂದ 4,235 ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ 1,60,728 ಸಕ್ರಿಯ ಪ್ರಕರಣಗಳಿದ್ದು, 4,46,881 ಮಂದಿ ಗುಣಮುಖರಾಗಿದ್ದಾರೆ ಹಾಗೂ 21,033 ಮಂದಿ ಸಾವನ್ನಪಪಿದ್ದಾರೆ.
ತಮಿಳುನಾಡಿನಲ್ಲಿ 53,155 ಸಕ್ರಿಯ ಪ್ರಕರಣಗಳಿದ್ದು, 2,96,171 ಮಂದಿ ಗುಣಮುಖರಾಗಿದ್ದಾರೆ ಹಾಗೂ 6,123 ಮಂದಿ ಸಾವಿಗೀಡಾಗಿದ್ದಾರೆ. ಕರ್ನಾಟಕದಲ್ಲಿ 81,113 ಸಕ್ರಿಯ ಪ್ರಕರಣಗಳಿವೆ ಹಾಗೂ 1,64,150 ಮಂದಿ ಗುಣಮುಖರಾಗಿದ್ದಾರೆ. 4,327 ಮಂದಿ ಮೃತಪಟ್ಟಿದ್ದಾರೆ.



