ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದ್ದು, ಇಂದು 172 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, 05 ಮಂದಿ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಇಂದು ಕೊರೊನಾದಿಂದ 145 ಮಂದಿ ಗುಣಮುಖರಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತ 3,830 ಮಂದಿಯಲ್ಲಿ 2,478 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು 05 ಜನ ಕೊರೊನಾದಿಂದ ಸಾವನ್ನಪ್ಪಿದ್ದು, ಒಟ್ಟು 105 ಜನ ಈವರೆಗೆ ಮೃತಪಟ್ಟಿದ್ದಾರೆ.
ಇಂದು ಪತ್ತೆಯಾದ ಕೇಸ್ ಗಳಲ್ಲಿ ದಾವಣಗೆರೆಯಲ್ಲಿ 81 , ಹರಿಹರ 23, ಜಗಳೂರು 01, ಚನ್ನಗಿರಿ 36, ಹೊನ್ನಾಳಿ 36 ಹಾಗೂ ಹೊರ ಜಿಲ್ಲೆಯ 02 ರಲ್ಲಿ ಕೊರೊನಾ ಪತ್ತೆಯಾಗಿದೆ.
ವಿನೋಬ ನಗರದ 53 ವರ್ಷ ಪುರುಷ, 70 ವರ್ಷದ ವೃದ್ಧ, ಪಿಜೆ ಬಡಾವಣೆಯ 71 ವರ್ಷದ ವೃದ್ಧ, ಎಂಸಿಸಿ ಬಿ ಬ್ಲಾಕ್ 62 ವರ್ಷದ ಮಹಿಳೆ ಹಾಗೂ ಬಸವರಾಜ ಪೇಟೆಯ 48 ವರ್ಷದ ಪುರುಷ ಮೃತಪಟ್ಟಿದ್ದಾರೆ.



