ಡಿವಿಜಿ ಸುದ್ದಿ, ದಾವಣಗೆರೆ : ಬೆಣ್ಣೆನಗರಿ ದಾವಣಗೆರೆ ಕೊರೊನಾ ಮಹಾಮಾರಿಗೆ ತತ್ತರಿಸಿ ಹೋಗಿದೆ. ಕಳೆದ 12 ದಿನದಿಂದ ಸತತವಾಗಿ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಇಂದು ಕೂಡ 12 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಬೆಳಗ್ಗೆಯ ಬುಲೆಟಿನ್ ನಲ್ಲಿ ದಾವಣಗೆರೆ ಒಂದು ಪ್ರಕರಣ ಪತ್ತೆಯಾಗದ ಹಿನ್ನೆಲೆ ಸ್ಪಲ್ಪ ನಿಟ್ಟುಸಿರು ಬಿಟ್ಟಿದ್ದ ದಾವಣಗೆರೆ ಜನರಿಗೆ ಇಂದು ಸಂಜೆಯ ವರದಿ ಬಿಗ್ ಶಾಕ್ ನೀಡಿದೆ. ಇಂದು ಬರೊಬ್ಬರಿ 12 ಪ್ರಕರಣ ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಮತ್ತೊಷ್ಟು ಆತಂಕ ಮೂಡಿಸಿದೆ.
ಏ. 29 ಕ್ಕಿಂತ ಮುನ್ನ ಯಾವುದೇ ಪ್ರಕರಣ ಪತ್ತೆಯಾಗದೇ ಗ್ರೀನ್ ಝೋನ್ ನಲ್ಲಿದ್ದ ಜಿಲ್ಲೆ ಇದೀಗ ಬರೊಬ್ಬರಿ 83 ಕೇಸ್ ಪತ್ತೆಯಾಗುವ ಮೂಲಕ ರೆಡ್ ಝೋನ್ ಗೆ ಬಂದು ನಿಂತಿದೆ. ಇಂದು ಪತ್ತೆಯಾದ 12 ಮಂದಿಯಲ್ಲಿ 696 ಸಂಪರ್ಕ ಹೊಂದಿದ್ದ 4ಜನ , 695 ಸಂಪರ್ಕ ಹೊಂದಿದ್ದ 2 ಹಾಗೂ ಅಹ್ಮದಾಬಾದ್ ಗೆ ಹೋಗಿ ಬಂದಿದ್ದ 6 ಮಂದಿಯಲ್ಲಿ ಕೊರೊನಾ ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಒಟ್ಟು 83 ಪಾಸಿಟಿವ್ ಪ್ರಕರಣಗಳಿದ್ದು, ಅದರಲ್ಲಿ 4 ಮಂದಿ ಮೃತಪಟ್ಟಿದ್ದಾರೆ. ಇನ್ನು 2 ಮಂದಿ ಗುಣಮುಖರಾಗಿದ್ದಾರೆ. ಇನ್ನು 77 ಪ್ರಕರಣಗಳು ಸಕ್ರಿಯವಾಗಿವೆ.



