ಡಿವಿಜಿ ಸುದ್ದಿ, ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಜಿಲ್ಲೆಯಲ್ಲಿ ಇಂದು ಮತ್ತೆ 3 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಸಾಗಿದೆ. ಇಂದು ಕೂಡ 3 ಕೊರೊನಾ ಪಾಸಿಟಿವ್ ಪ್ರಕಣ ಪತ್ತೆಯಾಗಿದ್ದು, ಈ ಮೂಲಕ ಮತ್ತಷ್ಟು ಆತಂಕ ಹೆಚ್ಚಾಗಿದೆ. ಇಂದು ಪತ್ತೆಯಾದ 3 ಪ್ರಕರಣಗಳಲ್ಲಿ ಈಗಾಗಲೇ ಸೋಂಕಿತರಾಗಿರುವ ನಂಬರ್ 662ರ ಜೊತೆ ಸಂಪರ್ಕ ಹೊಂದಿದ್ದ 33 ವರ್ಷದ ವ್ಯಕ್ತಿಗೆ ಪತ್ತೆಯಾಗಿದೆ. ಇನ್ನು ಸೋಂಕಿತ 663ರ ಜೊತೆ ಸಂಪರ್ಕ ಹೊಂದಿದ್ದ 30 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ. ಇದಲ್ಲದೆ ಸೋಂಕಿತ 667ರ ಜೊತೆ ಸಂಪರ್ಕ ಹೊಂದಿದ್ದ 56 ವರ್ಷದ ಮಹಿಳೆಯಲ್ಲಿ ಕೊರನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಸಂಖ್ಯೆ 71ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 4 ಮಂದಿ ಮೃತಪಟ್ಟಿದ್ದು, 2 ಗುಣಮುಖರಾಗಿದ್ದಾರೆ. ಇನ್ನು 65 ಪಾಸಿಟಿವ್ ಪ್ರಕಣಗಳು ಸಕ್ರಿಯವಾಗಿವೆ.



