ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ನಗರದಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದ್ದ ಶೇಖರಪ್ಪ ಬಡಾವಣೆ ಡಿನೋಟಿಫಿಕೇಷನ್ ಮಾಡಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶ ಹೊರಡಿಸಿದ್ದಾರೆ.
ರೋಗಿ ಸಂಖ್ಯೆ 9420 ರ ಪ್ರದೇಶವಾದ ಆವರಗೆರೆಯ ಶೇಖರಪ್ಪ ಬಡಾವಣೆಯನ್ನು ಕಂಟೈನ್‍ಮೆಂಟ್ ವಲಯಗಳೆಂದು ಘೋಷಿಸಿ ಕ್ರಮ ಕೈಗೊಳ್ಳಾಗಿತ್ತು. 14 ದಿನಗಳಿಂದ ಹೊಸ ಪ್ರಕರಣ ದಾಖಲಾಗದ ಹಿನ್ನಲೆಯಲ್ಲಿ ವಿಪತ್ತು ನಿರ್ವಹಣೆ ಕಾಯ್ದೆ ಅಡಿ ಕಂಟೈನ್‍ಮೆಂಟ್ ವಲಯವನ್ನು ಡಿನೋಟಿಫೈ ಮಾಡಲಾಗಿದೆ.
ಜೂನ್ 23 ರ ಸಂಜೆಯಿಂದ ಕೋವಿಡ್ ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 9420 ನೆಲೆಸಿದ್ದ ಶೇಖರಪ್ಪ ಬಡಾವಣೆಯ ಮನೆಯ ಪೂರ್ವಕ್ಕೆ ಶೇಖರಪ್ಪ ಬಡಾವಣೆ 1ನೇ ಮೇನ್. ಪಶ್ಚಿಮಕ್ಕೆ ಪೊಲೀಸ್ ನಾಗರಾಜಪ್ಪನವರ ಮನೆ. ಉತ್ತರಕ್ಕೆ ಹೋಟಲ್ ಈಶಪ್ಪ ನವರ ಮನೆ. ದಕ್ಷಿಣಕ್ಕೆ ಸರ್ಕಾರಿ ಶಾಲೆ.
ಹಾಗೂ ಈ ಬಡಾವಣೆಯ ಎಲ್ಲೆಯಲ್ಲಿರುವ ಪೂರ್ವಕ್ಕೆ ಗಣೇಶ ದೇವಸ್ಥಾನ, ಪಶ್ಚಿಮಕ್ಕೆ ಹಳೆ ಪಿಬಿ ರಸ್ತೆ, ಉತ್ತರಕ್ಕೆ ಮಂಜುನಾಥ ಶಾಲೆ ಮತ್ತು ದಕ್ಷಿಣಕ್ಕೆ 30 ನೇ ವಾರ್ಡ್‍ನ ವಾಟರ್ ಟ್ಯಾಂಕ್. ಈ ವ್ಯಾಪ್ತಿಯಲ್ಲಿದ್ದ 10 ಮನೆಗಳು, 35 ಜನಸಂಖ್ಯೆ, 04 ಅಂಗಡಿಗಳನ್ನು ಹಾಗೂ 200 ಮೀಟರ್ ಬಫರ್ ಝೋನ್ ಸೇರಿದಂತೆ ಈ ಕಂಟೈನ್‍ಮೆಂಟ್ ವಲಯವನ್ನು ನಿಯಮಾನುಸಾರ ಡಿನೋಟಿಫೈ ಮಾಡಲಾಗಿದೆ.



