Connect with us

Dvgsuddi Kannada | online news portal | Kannada news online

ದಾವಣಗೆರೆ: ಇಂದು 09 ಕೊರೊನಾ ಪಾಸಿಟಿವ್; ಸೋಂಕಿತ 6 ಗರ್ಭಿಣಿಯರು ಗುಣಮುಖ..!

ದಾವಣಗೆರೆ

ದಾವಣಗೆರೆ: ಇಂದು 09 ಕೊರೊನಾ ಪಾಸಿಟಿವ್; ಸೋಂಕಿತ 6 ಗರ್ಭಿಣಿಯರು ಗುಣಮುಖ..!

ಡಿವಿಜಿ ಸುದ್ದಿ, ದಾವಣಗೆರೆ:  ಜಿಲ್ಲೆಯಲ್ಲಿ ಇಂದು 09 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು,  ಹರಿಹರ ತಾಲ್ಲೂಕಿನ ರಾಜನಹಳ್ಳಿ 3, ಹರಿಹರ ನಗರದ ಅಗರಸಬೀದಿಯಲ್ಲಿ 6 ಕೊರೊನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇಂದು 09 ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 265 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 220 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. 07 ಸಾವು ಸಂಭವಿಸಿದ್ದು, ಪ್ರಸ್ತುತ 38 ಸಕ್ರಿಯ ಪ್ರಕರಗಣಗಳು ಇವೆ ಎಂದರು.

ಇಂದು 12, 7 , 8,16  ವರ್ಷದ ಬಾಲಕಿಯರು 55 ವರ್ಷದ ಮಹಿಳೆ,  50 ವರ್ಷದ ಪುರುಷ,  40 ವರ್ಷದ ಮಹಿಳೆ,  70 ವರ್ಷದ ವೃದ್ದ, 32 ವರ್ಷದ ಮಹಿಳೆಯಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಇವರು  ರೋಗಿ ಸಂಖ್ಯೆ-8065 ರ ಸಂಪರ್ಕಿತರು ಎಂದು ತಿಳಿಸಿದರು.

09 ಪಾಸಿಟಿವ್ ಇರುವ ಪ್ರಕರಣಗಳ ಪೈಕಿ ಅಗಸರ ಬೀದಿಯ ಒಬ್ಬರು ಗರ್ಭಿಣಿಯಿದ್ದು, ಇವರು ಎಎನ್‍ಸಿ ಪರೀಕ್ಷೆಗೆ ಬಂದಾಗ ಕೊರೊನಾ ಇರುವುದು ದೃಢಪಟ್ಟಿದೆ ಹಾಗೂ ಇವರ ಕುಟುಂಬದವರ ಸ್ವಾಬ್ ಟೆಸ್ಟ್ ಮಾಡಿಸಿದಾಗ ಅವರಿಗೂ ಸೋಂಕು ತಗುಲಿರುವುದು ದೃಢಪಟ್ಟಿದ್ದು ಇವರ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ಪ್ರಾಥಮಿಕ ವರದಿ ಪ್ರಕಾರ ಇವರು ದಾವಣಗೆರೆಯ ಬಾಷಾನಗರ ಮತ್ತು ಜಾಲಿನಗರಗಳಿಗೆ ಬಂದು ಹೋಗುತ್ತಿದ್ದರೆಂದು ತಿಳಿದು ಬಂದಿದೆ. ಇವರ ಪ್ರದೇಶವನ್ನು ಕಂಟೈನ್‍ಮೆಂಟ್ ವಲಯವನ್ನಾಗಿ ಮಾಡಲು ಕ್ರಮ ವಹಿಸಲಾಗಿದೆ ಎಂದರು.

ಚನ್ನಗಿರಿಯಲ್ಲಿ ಗೌಡರಬೀದಿ ಮತ್ತು ಕುಂಬಾರ ಬೀದಿಗಳಲ್ಲಿ ಪಾಸಿಟಿವ್ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಈ ಎರಡು ಪ್ರದೇಶಗಳನ್ನು ಕಂಟೈನ್‍ಮೆಂಟ್ ವಲಯಗಳನ್ನಾಗಿ ಮಾಡಲಾಗಿದೆ.

ಹೃದಯ ರೋಗ ಹೊಂದಿದ್ದ 18 ವರ್ಷದ ಸೋಂಕಿತ ಯುವತಿಯನ್ನು ಕೊರೊನಾದಿಂದ ಹಾಗೂ ಅತ್ಯುನ್ನತ ಚಿಕಿತ್ಸೆ ನೀಡುವ ಮೂಲಕ ಹೃದ್ರೋಗವನ್ನು ಗುಣಪಡಿಸಲಾಗಿದೆ. ಒಂದೇ ಕಿಡ್ನಿ ಹೊಂದಿದ್ದು ಅನಾರೋಗ್ಯದಿಂದ ಬಳಲುತ್ತಿದ್ದ 65 ವರ್ಷದ ಸೋಂಕಿತ ಮಹಿಳೆಯನ್ನು ಗುಣಪಡಿಸಲಾಗಿದೆ. ಕಾಲಲ್ಲಿ ಗ್ಯಾಂಗ್ರೀನ್ ಹೊಂದಿದ್ದ 69 ವರ್ಷದ ವೃದ್ದರನ್ನು ಕೊರೊನಾದಿಂದ ಗುಣಮುಖಪಡಿಸಿ ಹುಬ್ಬಳ್ಳಿಯ ಆಸ್ಪತ್ರೆಗೆ ಕಳುಹಿಸಿ ಅವರ ಕಾಲಿನ ಗ್ಯಾಂಗ್ರೀನ್ ರಿಮೂವ್ ಮಾಡಿಸಿ ಗುಣಪಡಿಸಲಾಗಿದೆ. ಹಾಗೂ ಹೃದ್ರೋಗ ಮತ್ತು ಹೈಪರ್‍ಟೆನ್ಶನ್ ಇದ್ದ 68 ವರ್ಷದ ವೃದ್ದೆ, 26 ಸೈಕೋಸಿಸ್ ಕಾಯಿಲೆಯಿಂದ ಬಳಲುತ್ತಿದ್ದ 26 ವರ್ಷದ ಯುವತಿ, ಗಂಭೀರ ನ್ಯುಮೋನಿಯಾ ಮತ್ತು ಹೈಪರ್‍ಟೆನ್ಶನ್‍ನಿಂದ ಬಳಲುತ್ತಿದ್ದ 73 ವರ್ಷದ ವೃದ್ದೆಯನ್ನು ಸಹ ಗುಣಪಡಿಸಲಾಗಿದೆ. ಜೊತೆತೆ ಅತ್ಯಂತ ಗಂಭೀರ ಸ್ಥಿತಿ ಹೊಂದಿದ್ದ 64 ವರ್ಷದ ಆರೋಗ್ಯ ಕಾರ್ಯಕರ್ತರನ್ನು ಹೈಫ್ಲೋ ನೇಸಲ್ ಆಕ್ಸಿಜನ್ ನೀಡಿ ಗುಣಪಡಿಸಲಾಗಿದೆ. ಹೀಗೆ ಅನೇಕ ತೀವ್ರತರ ಕಾಯಿಲೆಗಳಿರುವ ಸೋಂಕಿತರನ್ನೂ ಕೂಡ ಗುಣಪಡಿಸಿದ್ದೇವೆ ಎಂದು ಮಾಹಿತಿ ನೀಡಿದರು.

ನಮ್ಮಲ್ಲಿ ಅತ್ಯುತ್ತಮ ನುರಿತ ತಜ್ಞರು ಮತ್ತು ಆರೋಗ್ಯ ವ್ಯವಸ್ಥೆ ಇದೆ. ಆದರೆ ಜನರು ತಮ್ಮ ಲಕ್ಷಣಗಳನ್ನು ಮುಚ್ಚಿಡದೇ ಪ್ರಾಥಮಿಕ ಹಂತದಲ್ಲೇ ಬಂದಲ್ಲಿ ಜೀವ ಉಳಿಸುವ ಸರ್ವ ಪ್ರಯತ್ನ ಮಾಡಲಾಗುವುದು. ಆದ್ದರಿಂದ ಜನರಲ್ಲಿ ನಾನು ಆದಷ್ಟು ಬೇಗ ತಮ್ಮ ಲಕ್ಷಣಗಳ ಬಗ್ಗೆ ತಿಳಿಸಿ ತೋರಿಸಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ ಎಂದರು.

ಕೋವಿಡ್ ಇರುವ ಮೂವರು ಗರ್ಭಿಣಿಯರ ಹೆರಿಗೆ : ಕೋವಿಡ್ ಇರುವ ಮೂವರು ಗರ್ಭಿಣಿಯರ ಪೈಕಿ ಎರಡು ಸಹಜ ಮತ್ತು ಒಂದು ಸಿಜೇರಿಯನ್ ಹೆರಿಗೆಯನ್ನು ಯಶಸ್ವಿಯಾಗಿ ನಡೆಸುವಲ್ಲಿ ನಮ್ಮ ವೈದ್ಯರು ಸಫಲರಾಗಿದ್ದಾರೆ. ಈವರೆಗೆ 6 ಕೊರೊನಾ ಪಾಸಿಟಿವ್ ಗರ್ಭಿಣಿಯರನ್ನು ಗುಣಪಡಿಸಲಾಗಿದೆ ಎಂದರು.

ಈವರೆಗೆ ಜಿಲ್ಲೆಯಲ್ಲಿ 41 ಕಂಟೈನ್‍ಮೆಂಟ್ ಝೋನ್‍ಗಳಿದ್ದು ಈ ಪೈಕಿ 28 ದಿನಗಳ ಕಾಲ ಒಂದೂ ಹೊಸ ಕೋವಿಡ್ ಪ್ರಕರಣ ದಾಖಲಾಗದ 11 ಕಂಟೈನ್‍ಮೆಂಟ್ ಝೋನ್‍ಗಳನ್ನು ಡಿನೋಫೈ ಮಾಡಲಾಗಿದೆ. ಈ ಝೋನ್‍ಗಳಲ್ಲಿ ನಿರಂತರವಾಗಿ ಸಕ್ರಿಯ ಸರ್ವೆಲೆನ್ಸ್ ಕಾರ್ಯ ನಡೆಯುತ್ತಿದೆ. ಹೊಸ ಕಂಟೈನ್‍ಮೆಂಟ್ ಝೋನ್‍ಗಳಲ್ಲಿನ ಜನರ ಸ್ವಾಬ್ ಪರೀಕ್ಷೆ ನಡೆಸಲಾಗುವುದು. ಸೋಂಕಿತರ ಮೂಲ ಪತ್ತೆ ಕಾರ್ಯ ನಡೆದಿದೆ. ಐಎಲ್‍ಐ ಮತ್ತು ಎಸ್‍ಎಆರ್‍ಐ ವ್ಯಾಪಕ ಪರೀಕ್ಷೆ ನಡೆಸಲಾಗುತ್ತಿದೆ. ಬಿಎಲ್‍ಓಗಳ ಮೂಲಕ ಸರ್ವೇ ಕಾರ್ಯ ನಡೆದಿದೆ.

ತಾಲ್ಲೂಕು ಆರೋಗ್ಯಾಧಿಕಾರಿಗಳು, ಏರಿಯಾ ಮೆಡಿಕಲ್ ಆಫೀಸರ್, ಆರೋಗ್ಯ ಕಾರ್ಯಕರ್ತೆಯರ ಸರಪಳಿ ಮೂಲಕ ಸ್ವಾಬ್ ಸಂಗ್ರಹ ಆಗುತ್ತಿದ್ದು ಈ ಕಾರ್ಯಕ್ಕಾಗಿ ವಿಶೇಷ ತಂಡಗಳು ಮತ್ತು ವಾಹನಗಳನ್ನು ನೀಡಲಾಗಿದೆ. ಕೆಪಿಎಂಇ ಕಾಯ್ದೆಯಡಿ ಫಾರ್ಮಸಿಗಳಿಂದ ಕೆಮ್ಮು ಶೀತ ಜ್ವರಕ್ಕಾಗಿ ಮಾತ್ರೆ , ಔಷಧಿ ತೆಗೆದುಕೊಂಡವರ ಮಾಹಿತಿ ತೆಗೆದುಕೊಂಡು 35 ತಂಡಗಳನ್ನು ರಚಿಸಿ ಒಬ್ಬೊಬ್ಬರಿಗೆ 20 ರಿಂದ 25 ಆಸ್ಪತ್ರೆ ಮತ್ತು ಮೆಡಿಕಲ್ ಶಾಪ್ ವ್ಯಾಪ್ತಿ ನೀಡಿ ಅವರ ಸ್ವಾಬ್ ಪರೀಕ್ಷೆ ಮಾಡಿಸಲಾಗುತ್ತಿದೆ.

ಕ್ಷೇತ್ರ ವಲಯದಲ್ಲಿ 10 ರಿಂದ 15 ದಿನಗಳ ಕಾಲ ಸ್ವಾಬ್ ಸಂಗ್ರಹದ ವಿಶೇಷ ಆಂದೋಲನ ಮಾಡಲಾಗುವುದು. ಈಗಾಗಲೇ ಹೊನ್ನಾಳಿ ಮತ್ತು ಚನ್ನಗಿರಿ ಕೊಳಗೇರಿಗಳಲ್ಲಿ ಸ್ವಾಬ್ ಸಂಗ್ರಹಿಸಲಾಗುತ್ತಿದೆ ಎಂದ ಅವರು ಪ್ರತಿಯೊಬ್ಬರೂ ಓಡಾಡುವಾಗ ವೈಯಕ್ತಿಕ ಎಚ್ಚರಿಕೆ ವಹಿಸಬೇಕೆಂದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top