ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಇಂದು 03 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 08 ಜನರು ಕೋವಿಡ್‍ನಿಂದ ಸಂಪೂರ್ಣರಾಗಿ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ರೋಗಿ ಸಂಖ್ಯೆ 7803 25 ವರ್ಷದ ಮಹಿಳೆ ಇವರು ರಾಜಸ್ತಾನ ರಾಜ್ಯದಿಂದ ಹಿಂದಿರುಗಿರುವ ಹಿನ್ನೆಲೆ ಹೊಂದಿದ್ದಾರೆ. ರೋಗಿ ಸಂಖ್ಯೆ 7804 30 ವರ್ಷದ ಪುರುಷ ಮತ್ತು 7805 32 ವರ್ಷದ ಮಹಿಳೆ ಇವರು ಶೀತ ಜ್ವರ (ಇನ್‍ಫ್ಲುಯೆಂಜಾ ಲೈಕ್ ಇಲ್‍ನೆಸ್)ದ ಹಿನ್ನೆಲೆ ಹೊಂದಿದ್ದಾರೆ.
ರೋಗಿ ಸಂಖ್ಯೆಗಳಾದ 6151, 6152, 6153, 6154, 6155, 6156, 6157 ಮತ್ತು 6158 ಸಂಪೂರ್ಣವಾಗಿ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.ಜಿಲ್ಲೆಯಲ್ಲಿ ಒಟ್ಟು 233 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 215 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. 06 ಸಾವು ಸಂಭವಿಸಿದ್ದು ಪ್ರಸ್ತುತ 12 ಸಕ್ರಿಯ ಪ್ರಕರಗಣಗಳು ಇವೆ.



