ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿಂದು 1 ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಗುಣಮುಖರಾದ ಆರು ಜನರನ್ನು ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ರೋಗಿ ಸಂಖ್ಯೆ 4339 27 ವರ್ಷದ ಯುವಕ ಪಿ- 3862ರ ಜೊತೆ ಸಂಪರ್ಕಿತರಾಗಿದ್ದಾರೆ.ಇಂದು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ 3217, 3216, 3073, 3071, 3070 ಮತ್ತು 3072 ಸೇರಿ 6 ಜನರನ್ನು ಬಿಡುಗಡೆಗೊಳಿಸಲಾಯಿತು. ಒಟ್ಟು 180 ಸೋಂಕಿತರ ಪೈಕಿ ಇದುವರೆಗೆ 147 ಜನರು ಬಿಡುಗಡೆ ಹೊಂದಿದ್ದಾರೆ. ಸಕ್ರಿಯ 27 ಪ್ರಕರಣಗಳಿದ್ದು, ಈವರೆಗೆ 06 ಮರಣ ಹೊಂದಿದ್ದಾರೆ.



