ಡಿವಿಜಿ ಸುದ್ದಿ, ದಾವಣಗೆರೆ: ಮಧ್ಯ ಕರ್ನಾಟಕ ದಾವಣಗೆರೆ ಕೊರೊನಾ ಮಹಾಮಾರಿಗೆ ಅಕ್ಷರಶಃ ತತ್ತರಿಸಿ ಹೋಗಿದೆ. ಕಳೆದ 10 ದಿನದಿಂದ ಸತತವಾಗಿ ಕೊರೊನಾ ಪಾಸಿಟಿವ್ ಪ್ರಕಣಗಳು ಪತ್ತೆಯಾಗುತ್ತಿದ್ದು, ಇಂದು ಹೊಸದಾಗಿ 14 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 6 ಮಕ್ಕಳಲ್ಲಿ ಪಾಸಿಟಿವ್ ಪತ್ತೆಯಾಗಿರುವುದು ಆತಂಕ ಪಡುವಂತಹ ಸಂಗತಿಯಾಗಿದೆ.
ದಾವಣಗೆರೆ ಏ. 29 ವರೆಗೆ ಗ್ರೀನ್ ಝೋನ್ ನಲ್ಲಿತ್ತು. ಭಾಷಾನಗರ ನರ್ಸ್ ಗೆ ಪಾಸಿಟಿವ್ ಪತ್ತೆಯಾಗುವ ಮೂಲಕ 28 ದಿನಗಳ ನಂತರ ಮೊದಲ ಕೊರೊನಾ ಕೇಸ್ ಕಾಣಿಸಿಕೊಂಡಿತು. ಈ ಕೇಸ್ ಬಂದಾಗಿನಿಂದ ಶುರುವಾದ ಕೊರೊನಾ ಮಹಾಮಾರಿ ದಾವಣಗೆರೆ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಕಳೆದ ಒಂದು ವಾರದಿಂದ ಸತತವಾಗಿ ಪಾಸಿಟಿವ್ ಕೇಸ್ ಗಳು ಪತ್ತೆಯಾಗುತ್ತಲೇ ಇವೆ. ಇದರೊಂದಿಗೆ ಜಿಲ್ಲೆಯಲ್ಲಿ ಬರೊಬ್ಬರಿ 61 ಕೇಸ್ ಪತ್ತೆಯಾದಂತಾಗಿದೆ.

ಇಂದು ಪತ್ತೆಯಾದ ಪ್ರಕಣಗಳು ಜಾಲಿನಗರ, ಭಾಷಾನಗರದಲ್ಲಿ ಪತ್ತೆಯಾಗಿದ್ದ ನರ್ಸ್ ಮತ್ತು ವೃದ್ಧನ ಸುತ್ತಮುತ್ತಲಿನ ನಿವಾಸಿಗಳಲ್ಲಿ ಸಂಗ್ರಹಿಸಿದ ಮಾದರಿಗಳಾಗಿವೆ .ಇಂದು ಜಿಲ್ಲೆಯಲ್ಲಿ 14 ಪ್ರಕರಣದಲ್ಲಿ 6 ಮಕ್ಕಳು ಸೇರಿದ್ದಾರೆ. ಆಟವಾಡಿ ಬೆಳೆಯುವ ಹೊತ್ತಿನಲ್ಲಿ ಪುಟ್ಟ ಪುಟ್ಟ ಕಂದಮ್ಮಗಳಲ್ಲಿಯೂ ಕೊರೊನಾ ಪಾಸಿಟಿವ್ ಬಂದಿರುವುದು ಇನ್ನುಷ್ಟು ಆತಂಕ ಹೆಚ್ಚಿಸಿದೆ. ಅದರಲ್ಲೂ ಕೇಲವ 3 ವರ್ಷದ ಮಗುವಿಗೆ ಪಾಸಿಟಿವ್ ಬಂದಿರುವುದು ಭಾರಿ ಆತಂಕ ಸೃಷ್ಟಿಸಿದೆ.
ಪಿ724-10 ವರ್ಷ, ಪಿ729-06 ವರ್ಷ, ಪಿ730 -09 ವರ್ಷ, ಪಿ733- 3 ವರ್ಷ, ಪಿ735 -13 ವರ್ಷ, ಪಿ736-08 ಹೀಗೆ ಆರು ಮಕ್ಕಳು ಕೇವಲ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಅದರಲ್ಲೂ ಕೊರೊನಾ ಎಂದರೆ ಏನು ಅಂತಾನೇ ಗೊತ್ತಿಲ್ಲದ ಪಿ733ರ ಕೇವಲ 3 ವರ್ಷದ ಮಗುವಿಗೆ ಪಾಸಿಟಿವ್ ಪತ್ತೆಯಾಗಿದೆ. ಈ ಮೂಲಕ ಹಳೇ ದಾವಣಗೆರೆ ಭಾಗದಲ್ಲಿ ಸಮೂಹ ಹಂತಕ್ಕೆ ಕೊರೊನಾ ವೈರಸ್ ಬಂದಿದೆಯಾ ಎನ್ನುವ ಶಂಕೆ ವ್ಯಕ್ತತವಾಗುತ್ತಿದೆ.




