ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ವೈರಸ್ ಭೀತಿ ಹಿನ್ನೆಲೆ ದೇಶದಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಮಫಲಕ ಕಲಾವಿದರ ಸಂಘದಿಂದ ನಗರದ ಜಯದೇವ ವೃತ್ತದಲ್ಲಿ ಕೊರೊನ ವೈರಸ್ ಬೃಹತ್ ಆಕಾರದ ಚಿತ್ರ ರಚಿಸಿ ಜಾಗೃತಿ ಮೂಡಿಸಿದರು.
ಡೆಡ್ಲಿ ಕೊರೊನಾ ವೈರಸ್ ನಿಂದ ದೂರವಿರುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಅನಿರೀಕ್ಷಿತವಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಭೇಟಿ ನೀಡಿ ಸಂಘದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹತ್ತಾರು ಕಲಾವಿದರಿಂದ ಮಹಾಮಾರಿ ಕೊರೊನಾ ಚಿತ್ರ ಮೂಡಿ ಬಂದಿದ್ದು, ಸುಮಾರು 100 ಅಡಿಯಷ್ಟು ಸುತ್ತಳತೆ ಹೊಂದಿದೆ. ಸಾರ್ವಜನಿಕರಲ್ಲಿ ಸಾಮಾಜಿಕ ಅಂತರ ಕಾಪಾಡುವಂತೆ ಅರಿವು ಮೂಡಿಸಲಾಯಿತು.