ಡಿವಿಜಿ ಸುದ್ದಿ, ದಾವಣಗೆರೆ: ಇಂದು 3 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 13 ಜನ ಕೊರೊನಾದಿಂದ ಗುಣಮುಖರಾಗಿ ಆಸ್ವತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಇದುವರೆಗೆ ಒಟ್ಟು 166 ಪ್ರಕರಣಗಳು ವರದಿಯಾಗಿದ್ದು, 134 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಂದು ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದು, ಒಟ್ಟು 5 ಸಾವು ಸಂಭವಿಸಿದ್ದು, 27 ಸಕ್ರಿಯ ಪ್ರಕರಣಗಳು ಚಿಕಿತ್ಸೆ ಪಡೆಯುತ್ತಿವೆ.
ಇಂದು 286 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಇಂದು ಒಟ್ಟು 383 ನೆಗೆಟಿವ್ ಎಂದು ವರದಿ ಬಂದಿದೆ. 286 ಜನರ ಪರೀಕ್ಷೆಯ ಫಲಿತಾಂಶ ನಿರೀಕ್ಷೆಯಲ್ಲಿದೆ. ಇದುವರೆಗೆ ಒಟ್ಟು 9268 ಜನರ ಗಂಟಲುದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು 8644 ನೆಗೆಟಿವ್ ಎಂದು ವರದಿ ಬಂದಿದೆ.

ಪಿ- 3861 ರ 80 ವರ್ಷದ ವೃದ್ಧೆ, ಪಿ- 3862 ರ 23 ವರ್ಷದ ವ್ಯಕ್ತಿ ಹಾಗೂ ಪಿ-3977 ರ 27 ವರ್ಷದ ಯುವಕನಲ್ಲಿ ಇಂದು ಪಾಸಿಟೀವ್ ಪತ್ತೆಯಾಗಿದೆ. ಇಂದೇ ಪತ್ತೆಯಾದ 3861 ರ 80 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ. ಸಾವನ್ನಪ್ಪಿದ ವೃದ್ಧೆಗೆ ಪಿ-2415 ಸಂಪರ್ಕದಿಂದ ಪಾಸಿಟಿವ್ ಪತ್ತೆಯಾಗಿತ್ತು.
16 ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಪ್ರತಿ ದಿನ ಜ್ವರ, ಐಎಲ್‍ಐ, ಸಾರಿ ಸಮೀಕ್ಷೆ ನಡೆಸಲಾಗುತ್ತಿದೆ. 3 ದಿನಗಳಿಗೊಮ್ಮೆ ಬಫರ್ ಝೋನ್‍ನಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ತೀವ್ರ ಉಸಿರಾಟದ ತೊಂದರೆಗೆ(ಎಸ್‍ಎಆರ್‍ಐ)ಸಂಬಂಧಿಸಿದಂತೆ ಇದುವರೆಗೆ 338 ಪರೀಕ್ಷೆ ನಡೆಸಲಾಗಿದ್ದು ಈ ಪೈಕಿ 3 ಪಾಸಿಟಿವ್ ಬಂದಿದ್ದು, 331 ನೆಗೆಟಿರ್ ಎಂದು ವರದಿ ಬಂದಿದೆ.
3 ರ ಫಲಿತಾಂಶ ನಿರೀಕ್ಷೆಯಲ್ಲಿದೆ. ಶೀತ ಕೆಮ್ಮು ಜ್ವರ (ಐಎಲ್‍ಐ)ಕ್ಕೆ ಸಂಬಂಧಿಸಿದಂತೆ 652 ಪರೀಕ್ಷೆ ನಡೆಸಲಾಗಿದ್ದು, 619 ನೆಗೆಟಿವ್ ಎಂದು ವರದಿ ಬಂದಿದ್ದು, 7 ಪಾಸಿಟಿವ್ ವರದಿ ಬಂದಿದೆ ಮತ್ತು 26 ಜನರ ಪರೀಕ್ಷೆ ಫಲಿತಾಂಶ ನಿರೀಕ್ಷೆಯಲ್ಲಿದೆ ಇಂದು 13 ಜನರ ಡಿಸ್ಚಾರ್ಜ್ ಆಗಿದ್ದಾರೆ.



