ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ವೈರಸ್ ಲಾಕ್ ಡೌನ್ ನಿಂದ ಬ್ಯೂಟಿ ಪಾರ್ಲರ್ ಗಳು ತೆರೆಯದೇ ಇರುವುದರಿಂದ ನಷ್ಟ ಉಂಟಾಗಿದ್ದು, ಈ ನಷ್ಟಕ್ಕೆ ಪರಿಹಾರ ನೀಡಬೇಕು. ಹಾಗೆಯೇ ಬ್ಯೂಟಿ ಪಾರ್ಲರ್ ತೆರೆಯಲು ಅವಕಾಶ ನೀಡುವಂತೆ ಜಿಲ್ಲಾ ವೃತ್ತಿಪರ ಬ್ಯೂಟಿಷಿಯನ್ಸ್ ಮತ್ತು ಬ್ಯೂಟಿಪಾರ್ಲರ್ ಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಲಾಕ್ ಡೌನ್ ನಿಂದ ಕಳೆದ ಒಂದುವರೆ ತಿಂಗಳಿಂದ ಶಾಪ್ ಒಪನ್ ಮಾಡಿಲ್ಲ. ಇದರಿಂದ ಶಾಪ್ ಬಾಡಿಗೆ ಕಟ್ಟುವುದಕ್ಕೂ ಕಷ್ಟವಾಗಿದೆ. ಇನ್ನು ನಮ್ಮನ್ನು ನಂಬಿದ ಕುಟುಂಬವನ್ನು ನಿರ್ವಹಣೆ ಮಾಡುವುದು ಕಷ್ಟವಾಗಿದೆ.
ಇನ್ನು ಸೌಂಧರ್ಯ ವರ್ಧಕಗಳನ್ನು ಬಳಸದೇ ಇರುವುದರಿಂದ ಅವುಗಳ ಅವಧಿ ಮುಗಿದು ಹೋಗಿದೆ. ಹೀಗಾಗಿ ಬ್ಯೂಟಿ ಪಾರ್ಲರ್ ಗಳಿಗೆ ಪರಿಹಾರ ನೀಡಬೇಕು. ಸರ್ಕಾರದ ಮಾರ್ಗ ಎಲ್ಲ ಸೂಚಿಯನ್ನು ಪಾಲಿಸಲು ನಾವು ಸಿದ್ಧವಿದ್ದು, ಬ್ಯೂಟಿ ಪಾರ್ಲರ್ ತೆರೆಯಲು ಅವಕಾಶ ನೀಡಬೇಕು ಎಂದು ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.
ಈ ಸಂರ್ಭದಲ್ಲಿ ಪದ್ಮಜಾ ರಾವ್, ಶೈಲಜಾ, ರೂಪಾ ಎಸ್, ಸುಪ್ರಿಯಾ, ಪದ್ಮಾಂಬಿಕಾ, ಮಂಜುಳಾ, ಶಿಲ್ಪಾ, ದಿವ್ಯ, ಭಾಗ್ಯ, ಅರುಣಾ, ರತ್ನ, ವಾಣಿ, ನಿರ್ಮಲಾ, ನಿವೇದಿತಾ, ಸುಜಾತ, ಅರುಣ ಎಂ.ಬಿ, ಜ್ಯೋತಿ ಉಪಸ್ಥಿತರಿದ್ದರು.



