ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಾದ್ಯಂತ ಕೋವಿಡ್-19 ಸೋಂಕು ಹರಡತೆ ಮುಂಜಾಗ್ರತಾ ಕ್ರಮವಾಗಿ ವಿವಿಧ ಸರ್ಕಾರಿ ಇಲಾಖೆಗಳ ಸೇವೆಗಳನ್ನು ಮಾ.31 ರವರೆಗೆ ಮುಂದೂಡಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿರುತ್ತಾರೆ.
ಈ ಹಿನ್ನಲೆಯಲ್ಲಿ ಜಿಲ್ಲೆ ವ್ಯಾಪ್ತಿಯ ವಿವಿಧ ಸೇವೆಗಳನ್ನು ಒದಗಿಸುತ್ತಿರುವ ಅಟಲ್ ಜೀ ಜನಸ್ನೇಹಿ ಕೇಂದ್ರ ಮತ್ತು ಸ್ಪಂದನ ಕೇಂದ್ರ, ಆಧಾರ ಸೇವಾ ಕೇಂದ್ರ, ಹೊಸ ವಾಹನ ಚಾಲನಾ ರಹದಾರಿ , ಪರವಾನಿಗೆ ನೋಂದಣಿ, ಉಪ ನೋಂದಾಣಧಿಕಾರಿಗಳ ಕಚೇರಿಯ ಸ್ಥಿರಾಸ್ಥಿ ನೊಂದಣಿ ಸೇವೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸೇವೆಗಳಾದ ಖಾತೆ, ಸಾರ್ವಜನಿಕ ಹರಾಜುಗಳು, ಗ್ರಾಮ ಸಭೆ ಮತ್ತು ಜನನ, ಮರಣ ಪತ್ರಗಳು ಹಾಗೂ ಲೈಸೆನ್ಸ್ ನೀಡುವಿಕೆಯನ್ನು ಮುಂದೂಡಲಾಗಿದೆ.
ಸಹಕಾರಿ ಸಂಘಗಳ ಉಪ ನಿಬಂಧಕರು ಹಾಗೂ ಸಹಾಯಕ ನಿಬಂಧಕರ ಸಹಕಾರ ಇಲಾಖೆಗೆ ಸಂಬಂಧಿಸಿದ ಸೇವೆಗಳು, ಕೃಷಿ/ತೋಟಗಾರಿಕೆ / ಮೀನುಗಾರಿಕೆ ಇಲಾಖೆ ಮತ್ತು ಸಮಾಜಕಲ್ಯಾಣ ಇಲಾಖೆ /ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ/ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಅಧೀನದಲ್ಲಿ ಬರುವ ನಿಗಮ ಮಂಡಳಿಗಳ ಸೇವೆಗಳು ಮತ್ತು ಯುವತಿ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇವೆಗಳು ಮತ್ತು ಜಿಲ್ಲೆಯ ಎಲ್ಲಾ ಬಟ್ಟೆ ಅಂಗಡಿಗಳು ಸೇವೆಗಳನ್ನು ಕೋವಿಡ್ -19 ರೆಗ್ಯೂಲೇಷನ್ ಅಡಿಯಲ್ಲಿ ಮೇಲ್ಕಂಡ ಎಲ್ಲಾ ಇಲಾಖೆಯ ಸೇವೆಗಳನ್ನು ಮುಂದೂಡಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.