ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಹೆಸರಿಗೆ ಮಾತ್ರ ಸ್ಮಾರ್ಟ್ ಸಿಟಿ ಆಡಳಿತದಲ್ಲಿ ಮಾತ್ರ ವರ್ಸ್ಟ್ ಸಿಟಿ ಎಂಬಂತಾಗಿದೆ. ನಾಗರಿಕರಿಗೆ ಅತಿ ಮುಖ್ಯವಾಗಿ ಬೇಕಾಗಿರುವುದು ನೀರಿನ ಸೌಕರ್ಯ. ಆದರೆ, ಪಾಲಿಕೆ ಆಡಳಿತ ಈ ಬಗ್ಗೆ ಸರಿಯಾಗಿ ಗಮನಹರಿಸುತ್ತಿಲ್ಲ ಎಂದು ಪಾಲಿಕೆ ವಿರುದ್ಧ ವಿಪಕ್ಷ ನಾಯಕ ಎ. ನಾಗರಾಜ್ ಕಿಡಿಕಾರಿದರು.

ಕಾಂಗ್ರೆಸ್ ಪಾಲಿಕೆಯ ಸದಸ್ಯರು ದೊಡ್ಡಬಾತಿ ಪಂಪಹೌಸ್ ಗೆ ಭೇಟಿ ನೀಡಿ ಅಲ್ಲಿರುವ ಅವ್ಯವಸ್ಥೆಯ ಪರಿಶೀಲನೆ ನಂತರ ಮಾತನಾಡಿದರು. ಹಳೆಯ ದಾವಣಗೆರೆ ಮತ್ತು ಹೊಸ ದಾವಣಗೆರೆಯ ಕೆಲವು ವಾರ್ಡುಗಳಿಗೆ ರಾಜನಹಳ್ಳಿ ಪಂಪಹೌಸ್ ನಿಂದ ನೀರು ಬರುತ್ತಿತ್ತು. ಅಲ್ಲಿರುವ 1000 hp 2, 500 hp 3 ಮೋಟಾರುಗಳ ಪೈಕಿ 500 hp1 ಮೋಟರ್ ಹೊರತುಪಡಿಸಿ ಇನ್ನುಳಿದ 4 ಮೋಟಾರ್ ಗಳು ರಿಪೇರಿಗೆ ಬಂದಿವೆ.
ದೊಡ್ಡ ಬಾತಿಯ ಪಂಪಹೌಸ್ ನಲ್ಲಿ 550 hp 5 ಮೋಟಾರುಗಳ ಪೈಕಿ 5 ಕೆಟ್ಟು ನಿಂತಿವೆ. ಅದರಲ್ಲಿ ಎರಡು ಮೋಟಾರುಗಳು ನಾಲ್ಕು ತಿಂಗಳಿನಿಂದ ರಿಪೇರಿಗೆ ಬಂದಿದ್ದ, ಅವುಗಳನ್ನು ದುರಸ್ತಿ ಮಾಡದೇ ಪಾಲಿಕೆ ನಿರ್ಲಕ್ಷ್ಯ ವಹಿಸಿದೆ. ಪಾಲಿಕೆಯ ಈ ರೀತಿಯ ನಿರ್ಲಕ್ಷ್ಯ ನೋಡಿದರೆ ನಾವು ಸ್ಮಾರ್ಟ್ ಸಿಟಿಯಲ್ಲೋ ಅಥವಾ ವರ್ಸ್ಟ್ ಸಿಟಿಯಲ್ಲೋ ಎಂಬ ಅನುಮಾನ ಬರುವಂತಾಗಿದೆ ಎಂದರು.
ಈ ಸದರ್ಭದಲ್ಲಿ ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್, ಗಡಿ ಗುಡಾಳ್ ಮಂಜುನಾಥ್, ಕೆ.ಚಮನ್ ಸಾಬ್, ಪಾಮೆನಹಳ್ಳಿ ನಾಗರಾಜ್, ಮುಖಂಡರಾದ ಉಮೇಶ್, ಸಾಮಾಜಿಕ ಜಾಲತಾಣದ ಕೆ.ಎಲ್. ಹರೀಶ್ ಬಸಾಪುರ ಉಪಸ್ಥಿತರಿದ್ದರು.



