ಡಿವಿಜಿ ಸುದ್ದಿ, ದಾವಣಗೆರೆ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ವಿಶ್ವದ ಮಹಾನ್ ಚಿಂತಕರಲ್ಲಿ ಒಬ್ಬರಾಗಿದ್ದು, ಅವರೊಬ್ಬ ಮಹಾನ್ ದಾರ್ಶನಿಕ ಹಾಗೂ ಮಾನವೀಯ ರಾಯಭಾರಿಯಾಗಿದ್ದರು ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಅಭಿಪ್ರಾಯಪಟ್ಟರು.
ನಗರದಲ್ಲಿ ಕಾಂಗ್ರೆಸ್ ಕಾರ್ಮಿಕ ವಿಭಾಗ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವ 129 ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಬನಮನ ಸಲ್ಲಿಸಿ ಮಾತನಾಡಿದರು.
ಅಂಬೇಡ್ಕರ್ ಶೋಷಿತ ವರ್ಗಗಳಿಗೆ ಬದುಕು ಕಟ್ಟಿಕೊಡಲು ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟರು. ಕೇವಲ ದಲಿತರಿಗೆ ಅಷ್ಟೇ ಅಲ್ಲದೇ ಸಮಾಜ ತಳಿತಕ್ಕೆ ಒಳಗಾದವರಿಗೆ ಧ್ವನಿಯಾಗಿದ್ದರು ಎಂದರು.
ಸಮಾಜದಲ್ಲಿ ಎಲ್ಲರನ್ನು ಸಮಾನವಾಗಿ ನೋಡುವ ಅವಕಾಶ ಬಂದಿದೆ, ಅದು ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ಮಾತ್ರ. ತಾವು ಅನುಭವಿಸಿದ ಕಷ್ಟವನ್ನು ಮೆಟ್ಟಿ ನಿಂತು, ಮನುಷ್ಯ ಮನುಷ್ಯರನ್ನಾಗಿ ನೋಡುವ ತತ್ವ, ಆದರ್ಶಗಳನ್ನು ನೀಡಿದ ಮಹಾನ್ ದಾರ್ಶನಿಕ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಇಂಟಾಕ್ ನ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಕೆ.ಎಂ. ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಅಲ್ಲಾವಲಿ ಗಾಜೀಖಾನ್, ಎಸ್. ಎಂ ಜಯಪ್ರಕಾಶ್ , ಡಿ.ಶಿವಕುಮಾರ್, ವಿನಯ್ ಜೋಗಪ್ಪನವರ್, ಕೆ.ಎಲ್. ಹರೀಶ್ ಬಸಾಪುರ, ಕೊಂಡಜ್ಜಿ ಮಲ್ಲಿಕಾರ್ಜುನ್, ಎಚ್. ಹರೀಶ್, ಮನು, ಡಿ. ದುಗ್ಗಪ್ಪ, ಕಮರ್ ಅಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಡಿವಿಜಿ ಸುದ್ದಿ, ವಾಟ್ಸಾಪ್: 7483892205



