ಡಿವಿಜಿ ಸುದ್ದಿ, ದಾವಣಗೆರೆ: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಬದಲಿಸಲು ಮುಂದಾದರೆ, ಇಡೀ ದೇಶದಲ್ಲಿ ರಕ್ತ ಕ್ರಾಂತಿಯಾದಿತು ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಎಚ್ಚರಿಕೆ ನೀಡಿದರು.
ಎನ್ ಎಸ್ ಯುಐ ನಗರ ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಿದ್ದ ಡಾ, ಬಿ.ಆರ್. ಅಂಬೇಡ್ಕರ್ ಅವರ 129 ನೇ ಜನ್ಮ ದಿನಾಚರಣೆಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಪುಷ್ಬನಮನ ಸಲ್ಲಿಸಿ, ಸಂವಿಧಾನದ ಪೀಠಿಕೆಯ ಪ್ರತಿಜ್ಞೆವಿಧಿ ಬೋಧಿಸಿದರು.
ಅಂಬೇಡ್ಕರ್ ಅವರ ಜನ್ಮ ದಿನವನ್ನು ಜಗತ್ತಿನಾದ್ಯಂತ ವಿಶ್ವ ಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ಅಂಬೇಡ್ಕರ್ ಭಾರತ ದೇಶಕ್ಕೆ ಅತ್ಯುತ್ತಮ ಸಂವಿಧಾನ ಕೊಡುಗೆ ನೀಡಿದ್ದಾರೆ. ಕೆಲವು ಕೋಮುವಾದಿ ಶಕ್ತಿಗಳು ಪದೇ ಪದೇ ಸಂವಿಧಾನ ಬದಲಿಸುವ ಮಾತನಾಡುತ್ತಿದ್ದಾರೆ. ಸಂವಿಧಾನ ಬದಲಿಸಲು ಮುಂದಾದರೆ ರಕ್ತ ಕ್ರಾಂತಿ ಆಗುತ್ತದೆ. ಸಂವಿಧಾನದ ಆಶಯಗಳನ್ನು ಎಲ್ಲರು ಪಾಲಿಸಬೇಕು ಎಂದರು.
ಈ ಸಂದರ್ಭದಲ್ಲಿ ದಾವಣಗೆರೆ ಎನ್ಎಸ್ ಯುಈ ಉತ್ತರ ವಲಯದ ಅಧ್ಯಕ್ಷ ಗಿರಿಧರ್ ಟಿ.ವಿ, ಕಾಂಗ್ರೆಸ್ ಮುಖಂಡ ಮುಜಾಯದ್, ಎಸ್.ಎಂ ಜಯಪ್ರಕಾಶ್, ಕೆ.ಎಂ. ಮಂಜುನಾಥ್ , ಡಿ.ಶಿವಕುಮಾರ್, ವಿನಯ್ ಜೋಗಪ್ಪನವರ್, ಕೆ.ಎಲ್. ಹರೀಶ್ ಬಸಾಪುರ, ಕೊಂಡಜ್ಜಿ ಮಲ್ಲಿಕಾರ್ಜುನ್, ಎಚ್. ಹರೀಶ್, ಮನು, ಡಿ. ದುಗ್ಗಪ್ಪ, ಕಮರ್ ಅಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಡಿವಿಜಿ ಸುದ್ದಿ, ವಾಟ್ಸಾಪ್: 7483892205



