ಡಿವಿಜಿ ಸುದ್ದಿ, ದಾವಣಗೆರೆ: ತಾಲ್ಲೂಕಿನ ಮಾಯಕೊಂಡ ಹೋಬಳಿಯ ಹುಚ್ಚವ್ವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್. ಬಸವಾಪುರ ಗ್ರಾಮದಲ್ಲಿ ಸುಮಾರು 8 ಅಲೆಮಾರಿ ಕುಟುಂಬಗಳು ಅಗತ್ಯ ವಸ್ತುಗಳಿಗಾಗಿ ಆಗ್ರಹಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಜೈನ ಸಮುದಾಯ ದಾವಣಗೆರೆ ತಹಶಿಲ್ದಾರ್ ಮೂಲಕ ಅಲೆಮಾರಿ ಸಮುದಾಯಕ್ಕೆ ಅಗತ್ಯ ಸಾಮಾಗ್ರಿಗಳನ್ನು ವಿತರಿಸಿದೆ.

ಮಕ್ಕಳು , ವೃದ್ದರೂ ಸೇರಿದಂತೆ ಸುಮಾರು 35 ಕ್ಕೂ ಅಧಿಕ ಅಲೆಮಾರಿಗಳು ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೂಜಿದಾರ, ಛತ್ರಿ ರಿಪೇರಿ, ಕೂದಲು ವ್ಯಾಪಾರ ಮಾಡುವ ಇವರು. ದಿನ ನಿತ್ಯ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದರು. ಆದರೆ, ಕಳೆದ 10 ದಿನದಿಂದ ಕೊರೋನಾ ಭೀತಿಯಿಂದ ಯಾವ ಊರಿನಲ್ಲಿಯೂ ವ್ಯಾಪಾರ ಮಾಡಲು ಬಿಡುತ್ತಿಲ್ಲ. ಹೀಗಾಗಿ ಜೀವನೋಪಾಯಕ್ಕಾಗಿ ಆಹಾರ ಸಾಮಾಗ್ರಿ ನೀಡಬೇಕು ಎಂದು ಅಲೆಮಾರಿ ಬುಡಕಟ್ಟು ಮಹಾ ಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರೇಶ ಕೆ. ಆಗ್ರಹಿಸಿದ್ದರು.
ಈ ಮನವಿಯ ಮೇರೆಗೆ ಜೈನ ಸಮಾಜದಿಂದ ಅಡುಗೆ ಎಣ್ಣೆ ಬೇಳೆ ಖಾರಾದ ಪುಡಿ ಉಪ್ಪು ವಿತರಣೆ, ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಲಾಯಿತು.



