ಡಿವಿಜಿ ಸುದ್ದಿ, ಚನ್ನಗಿರಿ: ರಾಜ್ಯದ ಮಾದರಿ ಶಾಲೆ ಹಾಗೂ ಕಂಪ್ಯೂಟರೈಸ್ಡ್ ಕಲಿಕಾ ಕೇಂದ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದಿರುವ ತಾಲ್ಲೂಕಿನ ಕೆರೆಬಿಳಚಿಯ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಇಂದು “ವಿಜ್ಞಾನ ಮೇಳ” ನಡೆಯಿತು.

ವಿದ್ಯಾರ್ಥಿಗಳು ಕಸದಿಂದ ರಸ ಎನ್ನುವಂತೆ ಅನುಪಯುಕ್ತ ವಸ್ತುಗಳನ್ನು ಉಪಯೋಗಿಸಿ ವಾಯುಮಾಲಿನ್ಯ, ಶಬ್ದ ಮಾಲಿನ್ಯ, ಪವನ ಯಂತ್ರಗಳು, ಮೋಟಾರ್ ಬೋಟ್, ರೈಲ್ವೆ ನಿಲ್ದಾಣ, ಜೆ ಸಿ ಬಿ ಯಂತ್ರ, ಕಲಾಕೃತಿಗಳು, ಹೀಗೆ ವಿಭಿನ್ನ ಬಗೆಯ ಕಲಾ ಅದ್ಭುತಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದವು.

ಪ್ರತಿಯೊಂದು ಕಲಾಕೃತಿಯ ಬಗ್ಗೆ ವಿದ್ಯಾರ್ಥಿಗಳ ವಿವರಣೆ ವಿಶಿಷ್ಟವಾಗಿತ್ತು. ಮೇಳದಲ್ಲಿ ಎಸ್. ಡಿ ಎಂ ಸಿ ಅಧ್ಯಕ್ಷೆ ಮಾಸೂಮ್ ಜಾನ್, ಅಸ್ಲಮ್ ಶೇಖ್ ಮುಖ್ಯೋಪಾಧ್ಯಾಯ ಕೋಮಲಾಕ್ಷಿ, ಹಾಗೂ ಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.



