ಡಿವಿಜಿ ಸುದ್ದಿ, ಚನ್ನಗಿರಿ: ಹಗಲು ಇರುಳೆನ್ನದೆ ಮಹಾಮಾರಿ ಕೊರೊನಾ ವಿರುದ್ದ ನಿರಂತರವಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿರುವ ಸಂತೇಬೆನ್ನೂರು ಪೋಲೀಸ್ ಠಾಣೆಯ ಸಿಬ್ಬಂದಿಗಳಿಗೆ ವಿನು ಸಾಗರ್ ಗ್ರೂಫ್ ಬೈರನಹಳ್ಳಿ ವತಿಯಿಂದ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪೋಲಿಸ್ ಉಪನಿರೀಕ್ಷಕ ಶಿವರುದ್ರಪ್ಪ ಎಸ್ ಮೇಟಿ, ಎಸ್ಐಗಳಾದ ವಿ.ರೇವಣಸಿದ್ದಪ್ಪ , ರಾಜಪ್ಪ, ಸುರೇಂದ್ರನಾಯ್ಕ , ಸಿಬ್ಬಂದಿಗಳಾದ ಪ್ರಕಾಶ್ . ಯಶವಂತ , ಮಧು ಸೇರಿದಂತೆ ವಿನು ಸಾಗರ್ ಗ್ರೂಪಿನ ಸದಸ್ಯರುಗಳಾದ ಸಂದೀಪ್ ಬೈರನಹಳ್ಳಿ , ನವೀನ್ ಸಾಗರ್ ಶಿವರುದ್ರಪ್ಪ ಕರೇಕಟ್ಟೆ ಡಿಜಿ ಸುನಿಲ್. ಉಪಸ್ಥಿತರಿದ್ದರು