ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾಸಭಾ ಕ್ಷೇತ್ರದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಬಡವರಿಗೆ ,ಹಿರಿಯ ನಾಗರಿಕರಿಗೆ ಅಗತ್ಯವಾದ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಮಹಾಮಾರಿ ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಲಾಕ್ ಡೌನ್ ಘೋಷಿಸಿದ್ದು, ಇಂತಹ ಸಂಧರ್ಭದಲ್ಲಿ ರಾಜ್ಯದ ಬಡ ಕುಟುಂಬಗಳು, ಅದರಲ್ಲೂ ವಿಶೇಷವಾಗಿ ಅಶಕ್ತ ಹಿರಿಯರಿಗೆ, ಮಕ್ಕಳಿಗೆ ಆವಶ್ಯಕ ಔಷಧಿಗಳನ್ನು ಉಚಿತವಾಗಿ ಒದಗಿಸುವ ಅಭಿಯಾನವನ್ನು ಯುವ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ವೈ. ವಿಜಯೇಂದ್ರ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ಮಾರ್ಗದರ್ಶನದಲ್ಲಿ ನಗರದಲ್ಲಿ ಔಷಧಿ ವಿತರಿಸಲಾಯಿತು.
ದಾವಣಗೆರೆ ದಕ್ಷಿಣ ಯುವ ಮೋರ್ಚಾ ಅಧ್ಯಕ್ಷ ಹಾಗು ಮಹಾನಗರಪಾಲಿಕೆ ಸದಸ್ಯ ಶಿವನಗೌಡ ಪಾಟೀಲ್ .ಯುವಮೋರ್ಚಾ ಕೊಶಾಧ್ಯಕ್ಷ ಶ್ರೀಕಾಂತ್ ನಿಲಗುಂದ .ಕಾರ್ಯದರ್ಶಿ ನಾಗರಾಜ್.ಅಂಗಡಿ ಅಭಿಷೇಕ್, ಪರಮೇಶ್ವರಪ್ಪ ಉಪಸ್ಥಿತಿರಿದ್ದರು



